Uncategorized

20ರ ಯುವತಿಯನ್ನ ಪ್ರೀತಿಸಿ ಮದುವೆಯಾದದ್ದಕ್ಕೆ 40 ವರ್ಷದ ವ್ಯಕ್ತಿಯ ಬರ್ಬರ ಹತ್ಯೆ..! ಮಹಿಳೆಯರೂ ಸೇರಿದಂತೆ ಯುವತಿಯ ಮನೆಯ 6 ಮಂದಿ ಅರೆಸ್ಟ್‌..!

ನ್ಯೂಸ್ ನಾಟೌಟ್: ಮದುವೆಯಾದರೂ ಪತ್ನಿಯರೊಂದಿಗೆ ಸಂಸಾರ ಮಾಡುವ ಭಾಗ್ಯ ಮಾತ್ರ ಸಿಗಲಾರದೆ ಆತ ಕೊಲೆಯಾಗಿದ್ದಾನೆ. ಚಿತ್ರದುರ್ಗದ ಕೋಣನೂರು ಗ್ರಾಮದ ಮಂಜುನಾಥ (40)ನೇ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಪ್ರಕರಣ ಸಂಬಂಧ ಪೊಲೀಸರು 6 ಆರೋಪಿಗಳನ್ನ ಬಂಧಿಸಿದ್ದಾರೆ. ಕಾವ್ಯ, ದಿವ್ಯ, ಶಂಕರಮ್ಮ, ಬಸವರಾಜ, ಪ್ರಸನ್ನ, ಹರ್ಷ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಒಟ್ಟಾರೆ ಈ ಪ್ರಕರಣದಲ್ಲಿ 20 ಜನರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಮಂಜುನಾಥನ ಪೋಷಕರಿಗೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ಮಾಹಿತಿ ನೀಡಿದ್ದಾರೆ.

ಈತನು ಕಳೆದ ಐದು ವರ್ಷಗಳ ಹಿಂದೆ ಮಡಿವಾಳ ಜನಾಂಗದ ಶಿಲ್ಪ ಎಂಬ ಯುವತಿಯನ್ನು ಪ್ರೀತಿಸಿ ಅಂತರ್ಜಾತಿ ವಿವಾಹವಾಗಿ ಆಕೆಯನ್ನು ವಂಚಿಸಿದ್ದನು ಎನ್ನಲಾಗಿದೆ. ಆಗ ಮನನೊಂದ ಶಿಲ್ಪ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ಆ ಪ್ರಕರಣದಲ್ಲಿ ಜೈಲು ಸೇರಿದ್ದ ಮಂಜುನಾಥನು (ಲಿಂಗಾಯತ) ಸ್ವಜಾತಿಯ ಮತ್ತೋರ್ವ ಯುವತಿಯನ್ನು ಪ್ರೀತಿಸಿ ಕಳೆದ 20 ದಿನಗಳ ಹಿಂದೆಯಷ್ಟೇ ನಾಯಕನಹಟ್ಟಿಯ ಹೊಸಗುಡ್ಡದ ದೇಗುಲದಲ್ಲಿ ಮದುವೆಯಾಗಿದ್ದನು. ಆದ್ರೆ ಇವರಿಬ್ಬರ ಮದ್ಯೆ ತೀವ್ರ ವಯಸ್ಸಿನ ಅಂತರವಿದ್ದು, ಜೈಲಿಂದ ಬಂದಿದ್ದ ಮಂಜುನಾಥನಿಗೆ ತಮ್ಮ ಮಗಳನ್ಮು ವಿವಾಹ ಮಾಡಿಕೊಡಲು ಒಪ್ಪದ ಕುಟುಂಬಸ್ಥರು ರಾಜಿಪಂಚಾಯ್ತಿಗೆ ಮುಂದಾಗಿದ್ದು, ಶೀಘ್ರದಲ್ಲೇ ಎಲ್ಲರ ಸಮ್ಮುಖದಲ್ಲಿ ಮದುವೆ ಮಾಡಿಕೊಡುವುದಾಗಿ ನಂಬಿಸಿ, ಯುವತಿಯನ್ನು ಮನೆಗೆ ಕರೆದೊಯ್ದಿದ್ದರು.

ಸಂಬಂಧಿಕರ ಊರಲ್ಲಿದ್ದ ಮಂಜುನಾಥ್‌ ಬುಧವಾರ ಗ್ರಾಮಕ್ಕೆ ಆಗಮಿಸಿದ್ದನು. ಈ ವೇಳೆ ಹುಡುಗಿಯ ಸಂಬಂಧಿಕರು ಸೇರಿದಂತೆ 20 ಜನರ ಗುಂಪು ಏಕಾಎಕಿ ದಾಳಿ ನಡೆಸಿದೆ. ಕೋಲು, ಕಣಿಗೆ, ಮತ್ತು ರಾಡಿನಿಂದ ಹಲ್ಲೆ ಮಾಡಿ ಮಂಜುನಾಥನನ್ನು ಹತ್ಯೆ ಮಾಡಿದ್ದಾರೆ. ಈ ವೇಳೆ ಮಂಜುನಾಥನ ತಂದೆ ಚಂದ್ರಪ್ಪ, ತಾಯಿ ಅನಸೂಯ ಮೇಲೂ ಹಲ್ಲೆಯಾಗಿದೆ ಎನ್ನಲಾಗಿದೆ.

Click

https://newsnotout.com/2024/11/jail-kannada-news-viral-video-up-police-praising/
https://newsnotout.com/2024/11/jail-kannada-news-viral-video-up-police-praising/
https://newsnotout.com/2024/11/big-boss-contestent-deepika-das-issue-mother-complaints/
https://newsnotout.com/2024/11/big-boss-contestent-deepika-das-issue-mother-complaints/

Related posts

ಕೊರಗಜ್ಜನ ಸನ್ನಿಧಿಯಲ್ಲಿ‘ಕಾಟೇರ’ ಡೈರೆಕ್ಟರ್ ತರುಣ್..!,ಚಿತ್ರ ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ಓಡೋಡಿ ಬಂದ ನಿರ್ದೇಶಕ..!

ಪುತ್ತೂರು:ಸ್ಕಾರ್ಪಿಯೋ ಕಾರಿನಲ್ಲೇ 41 ದೇಶ ಸುತ್ತಿದ ಯುವಕ..! ಸಾಹಸಿ ಸಿನಾನ್‍‌ನ್ನು ಶ್ಲಾಘಿಸಿದ ಬಿಜೆಪಿ ಮುಖಂಡ..!

ಪಂಡರಾಪುರಕ್ಕೆ ತೆರಳಿದ್ದ ವಿಠ್ಠಲ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ..! ಭಕ್ತರ ಮೇಲೆ ಮಹಾರಾಷ್ಟ್ರದ ಪುಂಡರು ದಾಳಿ ಮಾಡಿದ್ದೇಕೆ..?