Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಮನೆ ಮುಂದೆ ಆಡುತ್ತಿದ್ದ 2 ವರ್ಷದ ಮಗು ಮೇಲೆ ಕಾರು ಹರಿಸಿದ 15ರ ಬಾಲಕ..! ಇಲ್ಲಿದೆ ಮನಕಲಕುವ ವಿಡಿಯೋ

930

ನ್ಯೂಸ್‌ ನಾಟೌಟ್: 15 ವರ್ಷದ ಬಾಲಕ ಕಾರು ಚಲಾಯಿಸಿ ಮಗುವಿನ ಮೇಲೆ ಹರಿದು 2 ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದೆ.

ಮನೆಯ ಹೊರಗೆ ಆಡುತ್ತಿದ್ದ ಅನಾಬಿಯಾ (2) ಎಂಬ ಮಗುವಿನ ಮೇಲೆ 15 ವರ್ಷದ ಅಪ್ರಾಪ್ತ ಬಾಲಕ ಹ್ಯುಂಡೈ ವೆನ್ಯೂ ಕಾರು ಚಲಾಯಿಸಿದ್ದಾನೆ. ಕಾರು ಹರಿದ ಪರಿಣಾಮ ಸ್ಥಳದಲ್ಲಿಯೇ ಮಗು ಸಾವನ್ನಪ್ಪಿದೆ. ದೆಹಲಿಯ ಪಹರ್‌ಗಂಜ್‌ನಲ್ಲಿ ಮಾ.29ರಂದು ಈ ಭೀಕರ ದುರ್ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪಹರ್‌ ಗಂಜ್‌ ನಲ್ಲಿರುವ ತನ್ನ ಮನೆಯ ಹೊರಗಿನ ರಸ್ತೆಯಲ್ಲಿ ಆಡುತ್ತಿದ್ದ ಮಗುವಿನ ಮೇಲೆ ಅಪ್ರಾಪ್ತ ಬಾಲಕನೊಬ್ಬ ಹ್ಯುಂಡೈ ಕಾರನ್ನು ಚಲಾಯಿಸಿದ್ದಾನೆ. ಅಪಘಾತದ ಸಿಸಿಟಿವಿ ದೃಶ್ಯಗಳು ಬಿಡುಗಡೆಯಾಗಿವೆ.

ಘಟನೆ ನೋಡಿದವರು ಓಡಿ ಬಂದು ಕಾರನ್ನು ತಳ್ಳಿ ಮಗುವನ್ನು ಹೊರತೆಗೆದು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಮಗು ಮೃತಪಟ್ಟಿದೆ. ನೆರೆಮನೆಯವರ ಕಾರು ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ ಸಂಭವಿಸಿದಾಗ 15 ವರ್ಷದ ಮಗ ವಾಹನ ಚಲಾಯಿಸುತ್ತಿದ್ದ ಎಂದು ಸಿಸಿಟಿವಿ ದೃಶ್ಯಗಳಿಂದ ಪೊಲೀಸರು ಪತ್ತೆ ಮಾಡಿದ್ದಾರೆ.

ಈ ಸಂಬಂಧ ಕಾರು ಮಾಲೀಕ ಮತ್ತು ಆತನ ಮಗನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕನ ತಂದೆ ಪಂಕಜ್ ಅಗರ್ವಾಲ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿಆಲೋವೆರಾ ಡಬ್ಬದಲ್ಲಿ ಗಿಡಗಳಿಗೆ ಬಳಸುವ ಹರ್ಬಿಸೈಡ್ ಔಷಧ ಇಟ್ಟಿದ್ದ ಪೋಷಕರು..! 9ನೇ ತರಗತಿ ಬಾಲಕಿ ಸಾವು..!

ಅತ್ತೆ, ಮಗಳು, ನಾದಿನಿಗೆ ಗುಂಡಿಕ್ಕಿ ಹತ್ಯೆ ಮಾಡಿದ ವ್ಯಕ್ತಿ..! ಸೆಲ್ಫಿ ವಿಡಿಯೋ ಮಾಡಿ ಆರೋಪಿಯೂ ಆತ್ಮಹತ್ಯೆ..!

See also  Sand mining: ಬೃಹತ್ ಅಕ್ರಮ ಮರಳು ಗಣಿಗಾರಿಕೆ ಮೇಲೆ ದಾಳಿ..! ಕೋಟಿ ರೂ. ಮೌಲ್ಯದ ಮರಳು ವಶಕ್ಕೆ..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget