Latestಉಡುಪಿಉಡುಪಿಕರಾವಳಿರಾಜ್ಯಶಿಕ್ಷಣ

ಕಾರ್ಕಳ ಶಾಸಕರ ಮುದ್ದಿನ ಮಗಳಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.97 ಅಂಕ, ಮಗಳ ಸಾಧನೆಯ ಬಗ್ಗೆ ಸುನಿಲ್ ಕುಮಾರ್ ಹೆಮ್ಮೆಯ ಮಾತು

1.3k

ನ್ಯೂಸ್ ನಾಟೌಟ್: ಕಾರ್ಕಳ ಬಿಜೆಪಿ ಶಾಸಕ ಸುನೀಲ್‌ ಕುಮಾರ್‌ ಪುತ್ರಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.97 ಅಂಕ ಬಂದಿದೆ ಎಂಬ ಸಂತೋಷವನ್ನು ಶಾಸಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪುತ್ರಿಯ ಸಾಧನೆಗೆ ಸುನೀಲ್ ಕುಮಾರ್ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಫೇಸ್‌ ಬುಕ್‌ ನಲ್ಲಿ ಪೋಸ್ಟ್ ಹಾಕಿ, “ಮಗಳೇ ಓದಿಯಾಯ್ತಾ ಎಂದು ಪ್ರಶ್ನಿಸಿದಾಗಲೆಲ್ಲ, ‘ಒಳ್ಳೆ ಮಾರ್ಕ್ಸ್ ತೆಗೆದರೆ ಆಯ್ತಲ್ವಾ ಈಗ ಕಿರಿಕಿರಿ ಮಾಡಬೇಡಿ’ ಎಂದು ಹುಸಿಕೋಪ ಪ್ರದರ್ಶಿಸುತ್ತಿದ್ದಳು ನನ್ನ ಮುದ್ದಿನ ಮಗಳು ಪ್ರೇರಣಾ. ಈಗ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.97 ರಷ್ಟು ಅಂಕ ಪಡೆದು ಉತ್ತೀರ್ಣಳಾಗಿದ್ದಾಳೆ.‌

ಪರೀಕ್ಷೆಯೆಂದರೆ ಮಕ್ಕಳಿಗಿಂತ ಹೆತ್ತವರಿಗೆ ಕಾಳಜಿ ಹೆಚ್ಚು. ಆದರೆ ನಾವೆಂದೂ ಅಂಕ ಗಳಿಕೆಯ ಒತ್ತಡವನ್ನು ಅವಳ ಮೇಲೆ ಹೇರಿರಲಿಲ್ಲ. ಆದರೆ, ತನ್ನ ಜವಾಬ್ದಾರಿಯನ್ನು ಅರಿತು ಪರಿಶ್ರಮದಿಂದ ಓದಿದಳು. ಜ್ಞಾನಸುಧಾದ ಉಪನ್ಯಾಸಕರ ತಂಡ ಸೂಕ್ತ ಮಾರ್ಗದರ್ಶನ ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಲೇಬೇಕು. ಒಬ್ಬ ವಿಧೇಯ ವಿದ್ಯಾರ್ಥಿನಿಯಾಗಿ ಓದು ಹಾಗೂ ಮುಂದಿನ ಗುರಿಯೆಡೆಗಿನ ನಿನ್ನ ಸ್ಪಷ್ಟತೆಯ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ”. ಎಂದು ಬರೆದುಕೊಂಡಿದ್ದಾರೆ.

ಜೊತೆಗೆ “ಪುಸ್ತಕದ ಪಾಠದಷ್ಟೆ ಜೀವನದ ಪಾಠವೂ ಮುಖ್ಯ. ಆ ಸವಾಲನ್ನು ಅರ್ಥ ಮಾಡಿಕೊಳ್ಳುವುದೇ ನಿಜವಾದ ಭವಿಷ್ಯ” ಎಂಬ ಹಿತ ನುಡಿಯನ್ನೂ ತಿಳಿಸಿದ್ದಾರೆ.   

See also  ಮಡಿಕೇರಿ:ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕನಿಗೆ ಶಿಕ್ಷೆ ಪ್ರಕಟ..!; 3 ವರ್ಷ ಸಜೆ ,15 ಸಾವಿರ ದಂಡ ವಿಧಿಸಿದ ನ್ಯಾಯಾಲಯ,ಏನಿದು ಪ್ರಕರಣ?
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget