Latestಕ್ರೈಂದೇಶ-ವಿದೇಶ

ಪಾಕಿಸ್ತಾನಕ್ಕೆ 19 ಸಾವಿರ ಕೋಟಿ ರೂಪಾಯಿ ಸಾಲ ಕೊಟ್ಟ IMF..! ಭಾರತದ ವಿರೋಧದ ನಡುವೆಯೂ ಸಾಲ ಮಂಜೂರು..!

763

ನ್ಯೂಸ್ ನಾಟೌಟ್: ಭಾರತದ ವಿರೋಧದ ನಡುವೆಯೂ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಪಾಕಿಸ್ತಾನಕ್ಕೆ (Pakistan) 19 ಸಾವಿರ ಕೋಟಿ ರೂಪಾಯಿ ಸಾಲ ನೀಡಿದೆ. ಶುಕ್ರವಾರ (ಮೇ.09) ದಂದು ನಡೆದ ಐಎಂಎಫ್​ ಎಕ್ಸಿಕ್ಯೂಟಿವ್​ ಬೋರ್ಡನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಭಾರತದ ಮನವಿಯನ್ನು ಧಿಕ್ಕರಿಸಿ ಐಎಂಎಫ್​ ಪಾಕಿಸ್ತಾನಕ್ಕೆ ಸಾಲ ನೀಡಿದೆ.

ಐಎಂಎಫ್​ ಕಾರ್ಯಕಾರಿ ಮಂಡಳಿಯು ತನ್ನ ವಿಸ್ತೃತ ನಿಧಿ ಸೌಲಭ್ಯ (EFF) ಅಡಿಯಲ್ಲಿ ಪಾಕಿಸ್ತಾನಕ್ಕೆ 1 ಬಿಲಿಯನ್​ ಡಾಲರಗಳ ಎರಡನೇ ಸಾಲದ ಕಂತನ್ನು ವಿತರಿಸಲು ತೀರ್ಮಾನಿಸಿದೆ. ಆದರೆ, ಪಾಕಿಸ್ತಾನ ಪ್ರಯೋಜಿತ ಗಡಿಯಾಚೆಗಿನ ಭಯೋತ್ಪಾದನೆಗೆ ಹಣ ದುರಪಯೋಗಪಡಿಸಿಕೊಳ್ಳಬಹುದು ಎಂದು ಭಾರತ ಹೇಳಿದೆ. ಅಲ್ಲದೇ, ನಿರ್ಣಾಯಕ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಭೆಯಲ್ಲಿ ಮತದಾನದಿಂದ ದೂರ ಉಳಿದಿದೆ.

ಪುನರಾವರ್ತಿತ ಆರ್ಥಿಕ ಬಿಕ್ಕಟ್ಟುಗಳು ಮತ್ತು ಹಿಂದಿನ ಐಎಂಎಫ್​ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಕಳಪೆ ದಾಖಲೆ ಇದ್ದರೂ ಪಾಕಿಸ್ತಾನದ ಪ್ರಗತಿಯನ್ನು ಐಎಂಎಫ್​ ಪರಿಶೀಲಿಸಿದ ನಂತರ ಈ ಅನುಮೋದನೆ ನೀಡಿದೆ ಎಂದು ಹೇಳಿಕೊಂಡಿದೆ.

ಇನ್ನು, ಹಿಂದಿನ ಐಎಂಎಫ್​ ಸಾಲಗಳನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ಪಾಕಿಸ್ತಾನದ ನಿರಂತರ ವೈಫಲ್ಯದ ಬಗ್ಗೆ ಭಾರತ ಎಚ್ಚರಿಕೆ ನೀಡಿತ್ತು. ನಿಧಿಯ ಕಾರ್ಯಕ್ರಮ ವಿನ್ಯಾಸಗಳು ಮತ್ತು ಮೇಲ್ವಿಚಾರಣಾ ಕಾರ್ಯವಿಧಾನಗಳು ದೇಶದ ಆರ್ಥಿಕ ಮತ್ತು ರಾಜಕೀಯ ವಾಸ್ತವಗಳಿಗೆ ಹೊಂದಿಕೊಳ್ಳುತ್ತವೆಯೇ ಎಂದು ಭಾರತ ಪ್ರಶ್ನಿಸಿತ್ತು.

ಎರಡು ದಿನಗಳಿಂದ ಭಾರತ ನೀಡುತ್ತಿರುವ ತಿರುಗೇಟು ಸಹಿಸಲು ಕಷ್ಟ ಪಡುತ್ತಿರುವ ಪಾಕಿಸ್ತಾನವು ಟ್ವೀಟ್(x)​ ಮೂಲಕ ಭಾರಿ ನಷ್ಟವಾಗಿದೆ ಎಂದು ಉಲ್ಲೇಖಿಸಿ ಪಾಕಿಸ್ತಾನ ಸರ್ಕಾರದ ಆರ್ಥಿಕ ವ್ಯವಹಾರಗಳ ವಿಭಾಗವು ತನ್ನ ಅಂತಾಷ್ಟ್ರೀಯ ಪಾಲುದಾರರಿಂದ ದೊಡ್ಡ ಪರಿಹಾರವನ್ನು ಕೇಳಿತ್ತು.

ಭಾರತ- ಪಾಕ್ ಸಂಘರ್ಷ: ಕುತುಬ್ ಮಿನಾರ್ ಸೇರಿ ದೆಹಲಿಯ ಹಲವು ಐತಿಹಾಸಿಕ ತಾಣಗಳಿಗೆ ಬಿಗಿಭದ್ರತೆ..! ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ..!

ಅಗತ್ಯ ಬಿದ್ದರೆ ಮದರಸಾದ ಮಕ್ಕಳನ್ನು ಯುದ್ಧಕ್ಕೆ ಬಳಸಿಕೊಳ್ತೀವಿ ಎಂದ ಪಾಕ್‌ ರಕ್ಷಣಾ ಸಚಿವ..! ಇಲ್ಲಿದೆ ಸಂಪೂರ್ಣ ಮಾಹಿತಿ

“ಆಪರೇಷನ್ ಸಿಂದೂರ” ಟೈಟಲ್ ಗೆ ಸಿನಿಮಾ ನಿರ್ಮಾಪಕರರಿಂದ ಭಾರೀ ಬೇಡಿಕೆ..! ಸ್ಯಾಂಡಲ್ ವುಡ್, ಬಾಲಿವುಡ್‌ ನಿಂದ 2 ದಿನಗಳಲ್ಲಿ 30ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ..!

See also  ಸಂಪಾಜೆ: ಕೆ ಎಸ್ ಆರ್ ಟಿ ಸಿ ಬಸ್ ಅಪಘಾತ, ಎಲ್ಲರೂ ಪ್ರಾಣಾಪಾಯದಿಂದ ಪಾರು
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget