ದೇಶ-ಪ್ರಪಂಚ

ಪಾನಿಪೂರಿ ಸೇವಿಸಿ 19 ಮಕ್ಕಳು ಅಸ್ವಸ್ಥ ಪ್ರಕರಣ, ಚಿಕಿತ್ಸೆ ಫಲಕಾರಿಯಾಗದೆ ಓರ್ವ ಬಾಲಕ ಮೃತ್ಯು..ಕಣ್ಣೀರಲ್ಲಿ ಕುಟುಂಬ

ನ್ಯೂಸ್‌ ನಾಟೌಟ್‌ : ಪಾನಿಪೂರಿ ಸೇವಿಸಿ 19 ಮಕ್ಕಳು ಅಸ್ವಸ್ಥ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಚಿಕಿತ್ಸೆ ಫಲಕಾರಿಯಾಗದೆ ಓರ್ವ ಬಾಲಕ ಸಾವನ್ನಪ್ಪಿದ್ದಾನೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಮೃತ ಬಾಲಕ ಹಜರತ್ ಬಿಲಾಲ್ ಬಿನ್ ಇರ್ಫಾನ್ ಎಂದು ವರದಿಯಾಗಿದೆ.

ರಂಜಾನ್ ಹಬ್ಬದ ಹಿನ್ನಲೆ ಮಕ್ಕಳು ಉಪವಾಸ ಇದ್ದರು, ಉಪವಾಸ ಅಂತ್ಯ ಮಾಡಿ ಜಾಮೀಯಾ ಮಸೀದಿ ಬಳಿ ಪಾನಿಪೂರಿ ಸೇವಿಸಿದ್ದರು. ಪಾನಿಪೂರಿ ಸೇವನೆ ಬಳಿಕ ಮಕ್ಕಳಲ್ಲಿ ವಾಂತಿ ಬೇಧಿ, ಹೊಟ್ಟೆ ನೋವು ಕಾಣಿಸಿಕೊಂಡಿದೆ.ನಾಲ್ವರು ಮಕ್ಕಳನ್ನ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಇದೀಗ ಓರ್ವ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಹರಿಹರ ತಾಲೂಕಿನ ಮಲೆಬೆನ್ನೂರು ಪಟ್ಟಣದಲ್ಲಿ ನಡೆದ ಘಟನೆ ಇದಾಗಿದ್ದು, ಮಲೆಬೆನ್ನೂರು ಪಟ್ಟಣದಲ್ಲಿ ಕೆಲ ಕಡೆ ಪಾನಿಪುರಿ ಮಾರಾಟ ಮಾಡಲಾಗುತ್ತಿತ್ತು. ಇದೇ ಪಾನಿಪುರಿ ತಿದ್ದಿದ್ದ ಮಕ್ಕಳು ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದರು. ಕೂಡಲೇ ಅಸ್ವಸ್ಥಗೊಂಡ ಮಕ್ಕಳನ್ನು ಮಲೆಬೆನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಿಫ್ಟ್​ ಮಾಡಲಾಗಿತ್ತು.

ಇನ್ನು ಅಸ್ವಸ್ಥಗೊಂಡ 19 ಮಕ್ಕಳಲ್ಲಿ ಒಂದು ಮಗವಿನ ಸ್ಥಿತಿ ಚಿಂತಾಜನಕವಾಗಿತ್ತು. ಮಗುವಿಗೆ ದಾವಣಗೆರೆ ಬಾಪುಜಿ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೀಗ ಹಜರತ್ ಬಿಲಾಲ್ ಬಿನ್ ಇರ್ಫಾನ್ ಸಾವನ್ನಪ್ಪಿದ್ದಾನೆ.ಇದೀಗ ಮನೆ ಮಗುವನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Related posts

ಪ್ರೇಮಿಗಳ ದಿನದಂದು 16 ವಿಳಾಸಕ್ಕೆ ೧೬ ಕೇಕ್ ಒಂದೇ ಸಂದೇಶ..! ಈ ಖತರ್ನಾಕ್ ಪ್ರೇಮಿ ಯಾರು..? ಝೊಮ್ಯಾಟೋ ಈ ಬಗ್ಗೆ ಹೇಳಿದ್ದೇನು..?

ಸೇನಾ ವಿಮಾನ ಪತನ : ಪೈಲೆಟ್ ದುರಂತ ಅಂತ್ಯ !

ಭೀಕರ ರೈಲು ದುರಂತದ ಬೆನ್ನಲ್ಲೇ ಮುನ್ನೆಲೆಗೆ ಬಂತು ಅಂದು ಸುಬ್ರಹ್ಮಣ್ಯದಲ್ಲಿ ಸಂಭವಿಸಿದ್ದ ಘನಘೋರ ಬಸ್ಸು ದುರಂತ..! ಅಂದು ಶವಗಳನ್ನೆತ್ತಿ ನೆರವಾಗಿದ್ದ ಸುಳ್ಯದ ಉದ್ಯಮಿ ಹೇಳಿದ್ದೇನು?