Latestವಿಡಿಯೋವೈರಲ್ ನ್ಯೂಸ್

ಕೇವಲ 180 ಮೀಟರ್​ ದೂರಕ್ಕೆ ಓಲಾ ಬೈಕ್​ ಬುಕ್​ ಮಾಡಿದ ಯುವತಿ..! ಇದಕ್ಕೆ ಆಕೆ ನೀಡಿದ ಕಾರಣವೇನು..?

2.1k

ನ್ಯೂಸ್ ನಾಟೌಟ್: ಯುವತಿಯೊಬ್ಬಳು ಮಾಡಿರುವ ಕೆಲಸಕ್ಕೆ ಹಲವರು ಅಚ್ಚರಿಪಟ್ಟಿದ್ದಾರೆ. ಅಷ್ಟಕ್ಕೂ ಆಕೆ ಕೇವಲ 180 ಮೀಟರ್ ದೂರ ಕ್ರಮಿಸಲು ಓಲಾ ಬೈಕ್ ಬುಕ್ ಮಾಡಿದ್ದಾಳೆ.

ನಡೆದುಕೊಂಡು ಹೋದರೆ ಅಷ್ಟು ದೂರ ಕ್ರಮಿಸಲು ಎರಡು ನಿಮಿಷ ಕೂಡ ಬೇಡ. ಅಂಥದರಲ್ಲಿ ಇಷ್ಟು ಸಣ್ಣ ಪ್ರಯಾಣಕ್ಕೆ ಅವಳು ಬೈಕ್ ಬುಕ್ ಮಾಡಲು ಕಾರಣ ಅಚ್ಚರಿ ಮೂಡಿಸಿದೆ.ಓಲಾ ಬೈಕ್ ಸವಾರನೊಬ್ಬ ಈ ತಮಾಷೆಯ ವಿಡಿಯೋವನ್ನು ರೆಕಾರ್ಡ್​ ಮಾಡಿ, ತನ್ನ ಇನ್ ​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ವಿಡಿಯೋದಲ್ಲಿ ಬೈಕ್​ ಸವಾರ ಮತ್ತು ಯುವತಿಯ ನಡುವಿನ ಸಂಭಾಷಣೆ ಈ ಕೆಳಕಂಡಂತಿದೆ.

ಬೈಕ್​ ಸವಾರ, ಮೇಡಂ ನೀವು ವಿಳಾಸವನ್ನು ಸರಿಯಾಗಿ ನಮೂದಿಸಿದ್ದೀರಾ? ಅದು ತುಂಬಾ ಹತ್ತಿರದಲ್ಲಿದೆ ಎಂದು ತೋರಿಸುತ್ತದೆ ಎಂದು ಹೇಳಿದ್ದಾನೆ. ಯುವತಿ ಹೌದು, ನಾನು ಸರಿಯಾಗೆ ನಮೂದಿಸಿದ್ದೇನೆ ಎಂದಿದ್ದಾಳೆ.
ಬೈಕ್​ ಸವಾರ ನಗುತ್ತಾ, ನೀವು ಯಾಕೆ ಇಷ್ಟು ಕಡಿಮೆ ದೂರಕ್ಕೆ ಬೈಕ್​ ಬುಕ್ ಮಾಡಿದ್ದೀರಿ ಮೇಡಂ? ಎಂದು ಕೇಳಿದ್ದಾನೆ.

 

View this post on Instagram

 

A post shared by ROHIT VLOGSTER (@rohitvlogster)

ಈ ವೇಳೆ ಯುವತಿಯ ಉತ್ತರ ಕೇಳಿ ಸವಾರನಿಗೆ ನಗು ತಡೆಯಲಾಗಲಿಲ್ಲ. ಈ ಪ್ರದೇಶದಲ್ಲಿ ಬಹಳಷ್ಟು ಬೀದಿ ನಾಯಿಗಳಿವೆ. ಅವು ನನ್ನನ್ನು ಕಂಡರೆ ಬೆನ್ನಟ್ಟುತ್ತವೆ ಮತ್ತು ನನಗೆ ತುಂಬಾ ಭಯವಾಗುತ್ತದೆ. ಅದಕ್ಕಾಗಿಯೇ ನಾನು ಬೈಕ್ ಬುಕ್ ಮಾಡಿದೆ ಎಂದ್ದಾಳೆ. 180 ಮೀಟರ್ ದೂರದ “ಸುರಕ್ಷಿತ” ಪ್ರಯಾಣಕ್ಕೆ ಆ ಯುವತಿ ಪಾವತಿಸಿದ ಒಟ್ಟು ಮೊತ್ತ ಕೇವಲ 19 ರೂಪಾಯಿ ಎಂದು ವರದಿ ತಿಳಿಸಿದೆ.  

ರಸ್ತೆ ರಿಪೇರಿ ಮಾಡುತ್ತಿದ್ದಾಗ ಪುರಾತನ ಮಣ್ಣಿನ ಕಲಶ ಪತ್ತೆ..! ಅದರೊಳಗಿತ್ತು ರಾಜವಂಶದ 60 ಚಿನ್ನದ ನಾಣ್ಯಗಳು..!

ಭಾರತ-ಪಾಕ್ ಕದನ ವಿರಾಮ ಡೊನಾಲ್ಡ್ ಟ್ರಂಪ್ ನಿಂದ ಆದದ್ದು ಎಂದ ರಷ್ಯಾ..! ಟ್ರಂಪ್ ಹೇಳಿಕೆಗೆ ರಷ್ಯಾದಿಂದ ಅನುಮೋದನೆ..!

See also  ದೊಡ್ಡಡ್ಕ: ಮೇ17ರಿಂದ ಶ್ರೀದುರ್ಗಾದೇವಿ ಜಾತ್ರೋತ್ಸವ, ಸಂಭ್ರಮದ ಕಾರ್ಯಕ್ರಮಕ್ಕೆ ಸಿದ್ಧತೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget