ನ್ಯೂಸ್ ನಾಟೌಟ್: ವಿವಾಹಿತ ಮಹಿಳೆಯೊಬ್ಬರು ತನ್ನ ಪತಿ, ಮೂವರು ಮಕ್ಕಳನ್ನು ಬಿಟ್ಟು ಅಪ್ರಾಪ್ತ ಪ್ರಿಯಕರನ ಜತೆ ವಾಸಿಸಲು ಮುಂದಾದ ಘಟನೆ ಉತ್ತರ ಪ್ರದೇಶದ ಅಮ್ರೋಹಾದ ಸೈದಂಗಲಿ ಪ್ರದೇಶದಲ್ಲಿ ನಡೆದಿದೆ.
26 ವರ್ಷ ವಯಸ್ಸಿನ ಶಬ್ನಮ್ ಎಂಟು ವರ್ಷಗಳ ಹಿಂದೆ ಸೈದ್ ನಾಗ್ಲಿ ನಗರ ಪಂಚಾಯತ್ ನ ವ್ಯಕ್ತಿ ಜತೆ ಮದುವೆಯಾಗಿದ್ದರು. ಈ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಆದರೆ ಶಬ್ನಮ್ ಅವರ ಪತಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ದೈಹಿಕವಾಗಿ ದುರ್ಬಲರಾಗಿದ್ದರು.
ಒಂದು ವರ್ಷದ ಹಿಂದೆ ಶಬ್ನಮ್ ಗೆ ನೆರೆಮನೆಯ 17 ವರ್ಷದ ಬಾಲಕನ ಪರಿಚಯವಾಗುತ್ತದೆ. ಅಪ್ರಾಪ್ತ ಜತೆಗಿನ ಪರಿಚಯ ಪ್ರೇಮವಾಗಿ ಬದಲಾಗುತ್ತದೆ.
ಮೂರು ಮಕ್ಕಳ ತಾಯಿ ಶಬ್ನಮ್ ಅಪ್ರಾಪ್ತನ ಜತೆ ಸಲುಗೆಯಿಂದ ಇರುವ ವಿಚಾರ ಊರಿನ ಜನರಿಗೆ ಗೊತ್ತಾಗುತ್ತದೆ. ಇದರಿಂದ ಊರ ಮುಖ್ಯಸ್ಥರು ಪಂಚಾಯತ್ ಕರೆದು ಈ ಬಗ್ಗೆ ಚರ್ಚೆ ಮಾಡುತ್ತಾರೆ. ಶಬ್ನಮ್ ತಾನು ಬಯಸಿದ ಸ್ಥಳದಲ್ಲಿ ವಾಸಿಸಬಹುದು ಎಂದು ಪಂಚಾಯತ್ ತೀರ್ಮಾಣ ಮಾಡುತ್ತದೆ. ಇದರಿಂದ ಶಬ್ನಮ್ ತನ್ನ ಗಂಡನಿಗೆ ವಿಚ್ಛೇದನ ನೀಡಿ, ತನ್ನ ಮಕ್ಕಳನ್ನು ಅವನ ಆರೈಕೆಯಲ್ಲಿ ಬಿಟ್ಟು ಅಪ್ರಾಪ್ತನ ಜತೆ ಬಾಳುವುದಕ್ಕೆ ನಿರ್ಧರಿಸುತ್ತಾಳೆ. ಆದರೆ ಬಾಲಕನ ಚಿಕ್ಕ ವಯಸ್ಸಿನ ಕಾರಣ, ಈ ಸಮಯದಲ್ಲಿ ದಂಪತಿಗಳು ಕಾನೂನುಬದ್ಧವಾಗಿ ಮದುವೆಯಾಗಲು ಸಾಧ್ಯವಾಗಿಲ್ಲ.
ಸದ್ಯ ಶಬ್ನಮ್ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಈಗ ಶಿವಾನಿ ಎಂದು ತನ್ನ ಹೆಸರು ಬದಲಾಯಿಸಿಕೊಂಡಿದ್ದಾಳೆ. ತಾನು ಸ್ವಂತ ಇಚ್ಛೆಯಿಂದ ನಿರ್ಧಾರ ತೆಗೆದುಕೊಂಡಿದ್ದೇನೆ ಮತ್ತು ತುಂಬಾ ಸಂತೋಷವಾಗಿದ್ದೇನೆ ಎಂದು ಹೇಳುತ್ತಾಳೆ.
ಇದು ಈಕೆಯ ಮೂರನೇ ಸಂಬಂಧವಾಗಿದ್ದು, ಅಲಿಘಡ್ ನಲ್ಲಿ ಮೊದಲು ವಿವಾಹವಾಗಿದ್ದಳು. ಆ ಬಳಿಕ ಸೈದ್ ನಾಗ್ಲಿಯಲ್ಲಿ ಎರಡನೇ ವಿವಾಹವಾಗಿ ದೂರ ಆದ ಬಳಿಕ ಈಗ ಅಪ್ರಾಪ್ತನ ಜತೆ ಹೊಸ ಬದುಕನ್ನು ಬಾಳುವುದಕ್ಕೆ ಮುಂದಾಗಿದ್ದಾಳೆ.
ಇಂದು(ಎ.8) ವಿಚಾರಣೆಗೆ ದರ್ಶನ್ ಗೈರಾದದ್ದೇಕೆ..? ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್..!
ಗರ್ಭಿಣಿ ಪತ್ನಿಗೆ ನಡುರಸ್ತೆಯಲ್ಲಿ ಕಲ್ಲಿನಿಂದ ಜಜ್ಜಿ ಭೀಕರ ಹಲ್ಲೆ..! ಸಿಸಿಟಿವಿಯಲ್ಲಿ ದೃಶ್ಯ ಸೆರೆ..!