Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

16ರ ಬಾಲಕಿಯನ್ನು ಭೇಟಿಯಾಗಲು ಬಂದಿದ್ದ ಯುವಕನನ್ನು ವಿವಸ್ತ್ರಗೊಳಿಸಿ ಥಳಿಸಿದ ಜನ..! ವಿಡಿಯೋ ವೈರಲ್ ಆಗುತ್ತಿದ್ದಂತೆ ಐವರು ಅರೆಸ್ಟ್..!

777
Spread the love

ನ್ಯೂಸ್‌ ನಾಟೌಟ್: ಅಪ್ರಾಪ್ತ ಬಾಲಕಿಯನ್ನು ಕದ್ದು ಭೇಟಿ ಮಾಡಲು ಹೋಗಿದ್ದ ಯುವಕನನ್ನು ವಿವಸ್ತ್ರಗೊಳಿಸಿ ಥಳಿಸಿರುವ ಘಟನೆ ಛತ್ತೀಸ್ ​ಗಢದಲ್ಲಿ ನಡೆದಿದೆ. ತನ್ನ ಗೆಳತಿಯನ್ನು ಭೇಟಿಯಾಗಲು ಆಕೆಯ ಮನೆಗೆ ಬಂದಿದ್ದ ಹುಡುಗನನ್ನು ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿ ಥಳಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಛತ್ತೀಸ್‌ ಗಢದ ಶಕ್ತಿ ಜಿಲ್ಲೆಯಲ್ಲಿ 16 ವರ್ಷದ ಬಾಲಕಿಯನ್ನು ಭೇಟಿಯಾಗಲು ಹೋದ 21 ವರ್ಷದ ಯುವಕನನ್ನು ಹುಡುಗಿಯ ಕುಟುಂಬದವರು ವಿವಸ್ತ್ರಗೊಳಿಸಿ ಥಳಿಸಿದ್ದಾರೆ. ಪೊಲೀಸರು ಶುಕ್ರವಾರ(ಎ.13) ಈ ಪ್ರಕರಣದಲ್ಲಿ ಐದು ಜನರನ್ನು ಬಂಧಿಸಿದ್ದಾರೆ.

ಏಪ್ರಿಲ್ 8 ರ ರಾತ್ರಿ ಮಲ್ಖರೋಡಾ ಪೊಲೀಸ್ ಠಾಣೆ ವ್ಯಾಪ್ತಿಯ ಬಡೆ ರಾವೇಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪರಿಶಿಷ್ಟ ಜಾತಿಯ ಸತ್ನಾಮಿ ಸಮುದಾಯಕ್ಕೆ ಸೇರಿದ ದಾಬ್ರಾ ಪೊಲೀಸ್ ಠಾಣೆ ಪ್ರದೇಶದ ನಿವಾಸಿ ರಾಹುಲ್ ಅಂಚಲ್ 16 ವರ್ಷದ ಬಾಲಕಿಯನ್ನು ಭೇಟಿಯಾಗಲು ಬಂದಿದ್ದ.

ಹುಡುಗಿಯ ಕುಟುಂಬವು ರಾತ್ರಿ ಯುವಕನನ್ನು ತಮ್ಮ ಮನೆಯಲ್ಲಿ ಹಿಡಿದು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಆರೋಪಿಗಳು ರಾತ್ರಿಯಿಡೀ ರಾಹುಲ್‌ ಗೆ ಚಪ್ಪಲಿ, ಕೇಬಲ್‌ ಗಳು ಮತ್ತು ಪೈಪ್‌ ಗಳಿಂದ ಹೊಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ 9 ರ ಬೆಳಿಗ್ಗೆ ಗ್ರಾಮದ ಬೀದಿಗಳಲ್ಲಿ ರಾಹುಲ್‌ ನನ್ನು ಬೆತ್ತಲೆಯಾಗಿಸಿ ಥಳಿಸಲಾಗಿದೆ ಎನ್ನಲಾಗಿದೆ.

ರಾಹುಲ್‌ ನನ್ನು ರಾಯಗಢ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಯುವಕರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಯಾವುದೇ ದೂರು ಬಂದಿಲ್ಲ. ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ, ಪೊಲೀಸರು ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಐವರ ವಿರುದ್ಧ ಎಫ್ ​ಐಆರ್ ದಾಖಲಿಸಿದ್ದಾರೆ.

ಮಧ್ಯರಾತ್ರಿ ದೇಗುಲದ ಬಾಗಿಲು ತೆರೆಯುವಂತೆ ಯುವಕರಿಂದ ಕಿರಿಕ್..! 10 ಕಾರುಗಳಲ್ಲಿ ಬಂದಿದ್ದ ಸುಮಾರು 30 ಮಂದಿ ವಿರುದ್ಧ ಪ್ರಕರಣ ದಾಖಲು..!

ಮೈಸೂರು ದಸರಾ ಕ್ರೀಡಾಕೂಟದಲ್ಲಿ ಕಂಬಳ ಸೇರ್ಪಡೆ..! ಮಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಣೆ

See also  ಕುಕ್ಕೆ ಸುಬ್ರಹ್ಮಣ್ಯಕ್ಕೆ ಕತ್ರಿನಾ ಕೈಫ್ ಭೇಟಿ – ಸಂತಾನಕ್ಕಾಗಿ ಸರ್ಪ ಸಂಸ್ಕಾರ ಪೂಜೆ ಮಾಡಿದ್ರಾ ಬಾಲಿವುಡ್ ನಟಿ?
  Ad Widget   Ad Widget   Ad Widget   Ad Widget   Ad Widget   Ad Widget