Latestಕ್ರೈಂದೇಶ-ವಿದೇಶ

ನಿಗೂಢವಾಗಿ ಸಮುದ್ರ ತೀರಕ್ಕೆ ಬಂದು ಬಿದ್ದ 150 ತಿಮಿಂಗಿಲಗಳು..! ಈ ಬಗ್ಗೆ ಪರಿಸರ ಸಚಿವಾಲಯ ಹೇಳಿದ್ದೇನು..?

1.5k

ನ್ಯೂಸ್ ನಾಟೌಟ್: ಆಸ್ಟ್ರೇಲಿಯಾದ ವಾಯವ್ಯ ಪ್ರಾಂತ್ಯದ ತಾಸ್‌ ಮಾನಿಯಾ ರಾಜ್ಯದ ಅರ್ಥೂರ್ ನದಿ ಸಮುದ್ರ ಸೇರುವ ಕಡಲ ತೀರದ ಬಳಿ 150 ತಿಮಿಂಗಿಲಗಳು ತೇಲಿ ಬಂದು ದಡಕ್ಕೆ ಬಿದ್ದಿವೆ.
150 ತಿಮಿಂಗಿಲಗಳಲ್ಲಿ 136 ತಿಮಿಂಗಿಲ ಇನ್ನೂ ಬದುಕಿವೆ. ಉಳಿದವು ಸತ್ತಿವೆ. ಬದುಕಿರುವಲ್ಲಿ ಕೆಲವು ಸಾವು–ಬದುಕಿನ ಮಧ್ಯ ಹೋರಾಡುತ್ತಿವೆ ಎಂದು ಆಸ್ಟ್ರೇಲಿಯಾದ ಪರಿಸರ ಸಚಿವಾಲಯದ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಅಚ್ಚರಿ ಎನ್ನುವಂತೆ ದೊಡ್ಡ ಪ್ರಮಾಣದಲ್ಲಿ ತಿಮಿಂಗಿಲಗಳು ಕಡಲ ತೀರಕ್ಕೆ ಬಂದು ಬಿದ್ದಿರುವುದನ್ನು ಸ್ಥಳೀಯ ಮೀನುಗಾರರು ಗುರುತಿಸಿ ಅಧಿಕಾರಿಗಳಿಗೆ ತಿಳಿಸಿದ್ದರು.
ಆದರೆ, ಈ ಪ್ರದೇಶಕ್ಕೆ ಪರಿಹಾರ ಕಾರ್ಯಾಚರಣೆ ತಂಡ ತೆರಳುವುದಕ್ಕೆ ಭಾರಿ ಸಮಸ್ಯೆ ಇದೆ. ಇದೊಂದು ಜನವಸತಿ ಹಾಗೂ ಸಾರಿಗೆ ಸಂಪರ್ಕಗಳು ಇಲ್ಲದಿರುವ ಪ್ರದೇಶ ಎಂದು ಹೇಳಲಾಗಿದೆ. ಅದಾಗ್ಯೂ ಕೆಲವು ಮರಿ ತಿಮಿಂಗಿಲಗಳನ್ನು ಆಳ ಸಮುದ್ರಕ್ಕೆ ತಳ್ಳುವ ಪ್ರಯತ್ನ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಷ್ಟೊಂದು ಪ್ರಮಾಣದಲ್ಲಿ ತಿಮಿಂಗಿಲಗಳು ಸಮುದ್ರದ ತೀರಕ್ಕೆ ಬಂದು ಬಿದ್ದಿರುವುದಕ್ಕೆ ಕಾರಣ ಬಹಿರಂಗವಾಗಿಲ್ಲ. ಆಳ ಸಮುದ್ರದಲ್ಲಿ ಯಾವುದೋ ದೊಡ್ಡ ಶಬ್ದ, ಶತ್ರುಗಳ ದಾಳಿ, ಹವಾಮಾನ ವೈಪರಿತ್ಯ ಅಥವಾ ಅನಾರೋಗ್ಯದಿಂದ ಬಂದು ಬಿದ್ದಿರಬಹುದು ಎಂದು ವರದಿ ತಿಳಿಸಿದೆ.

See also  ಗಣೇಶನ ಪೂಜೆಗೆ ಇಟ್ಟ ಹಣಕ್ಕಾಗಿ ಸಹೋದರರ ನಡುವೆ ಗಲಾಟೆ..! ಅಣ್ಣನಿಗೇ ಚೂರಿ ಇರಿದ ತಮ್ಮ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget