ನ್ಯೂಸ್ ನಾಟೌಟ್ : ಸಿನಿಮಾ ಸೀರಿಯಲ್ ಗಳನ್ನೂ ಮೀರಿಸುವ ಘಟನೆಗಳು ಈಗ ವೈರಲ್ ಆಗುತ್ತಿರುತ್ತವೆ. ಬಿಹಾರದ ವೈಶಾಲಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, 30 ವರ್ಷದ ಮೂರು ಮಕ್ಕಳ ತಾಯಿಯೊಬ್ಬಳು 7ನೇ ತರಗತಿಯಲ್ಲಿ ಓದುತ್ತಿರುವ 15 ವರ್ಷದ ಹುಡುಗನೊಬ್ಬನನ್ನು ಮದುವೆಯಾಗಿದ್ದಾಳೆ.
ಈ ಪ್ರಕರಣವೀಗ ವಿವಾದಕ್ಕಿಡಾಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರದ ಬಗ್ಗೆ ಮಹಿಳೆಯನ್ನು ಪ್ರಶ್ನಿಸಿದಾಗ ಆಕೆ ತನ್ನ ಈ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾಳೆ. ಮಾಧ್ಯಮದವರು ಅಪ್ರಾಪ್ತ ಬಾಲಕನನ್ನು ಮದುವೆಯಾಗಿರುವುದು ಏಕೆ ಎಂದು ಮಹಿಳೆಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಮಹಿಳೆ, ನಾವಿಬ್ಬರು ಪ್ರೀತಿ ಮಾಡ್ತಿದ್ದೆವು ಹೀಗಾಗಿ ಮದ್ವೆಯಾಗಿದ್ದೇವೆ, ಇದರಲ್ಲಿ ತಪ್ಪೇನು ಎಂದು ಮಹಿಳೆ ಸಂಪೂರ್ಣ ವಿಶ್ವಾಸದಿಂದಲೇ ವರದಿಗಾರರನ್ನು ಮರು ಪ್ರಶ್ನಿಸಿದ್ದಾಳೆ.
ಹೀಗೆ ಮದ್ವೆಯಾದ ಮಹಿಳೆಯನ್ನು ಸೀಮಾ ಎಂದು ಗುರುತಿಸಲಾಗಿದೆ. ಇತ್ತ ಈಕೆ ಮದ್ವೆಯಾದ ಹುಡುಗ ಅಪ್ರಾಪ್ತನಾಗಿದ್ದು, ಇದೇ ಜಾಗದಲ್ಲಿ ಪುರುಷ ಇದ್ದಿದ್ದರೆ ಈಗ ಕಂಬಿ ಹಿಂದೆ ಕೂರಿಸುತ್ತಿದ್ದರು ಎಂದು ಅನೇಕರು ಹೇಳಿದ್ದಾರೆ.
ಮೂಲಗಳ ಪ್ರಕಾರ, ಮಹಿಳೆ ಸೀಮಾ ತನ್ನ ತಾಯಿ ಕಡೆಯಿಂದ ತನಗೆ ಮಾವನಾಗುವ ವ್ಯಕ್ತಿಯ ಮಗನನ್ನು ಮದುವೆಯಾಗಿದ್ದಾಳೆ. ಸಂದರ್ಶಕರು ಈಕೆಯ ಬಳಿ ಪ್ರಶ್ನಿಸಿದಾಗ ಆತನನ್ನು ಸಣ್ಣ ಮಗುವಿದ್ದಾಗಿನಿಂದಲೂ ಪ್ರೀತಿಸುತ್ತಿದ್ದಿದ್ದಾಗಿ ಹೇಳಿದ್ದಾರೆ. ಅಲ್ಲದೇ ತನ್ನ ಹಾಲಿ ಗಂಡ ತನ್ನನ್ನು ಪ್ರೀತಿಸುತ್ತಿಲ್ಲ, ಹೀಗಾಗಿಯೇ ಆತನನ್ನು ಬಿಟ್ಟು ಈ ಸಣ್ಣ ಹುಡುಗನನ್ನು ಮದ್ವೆಯಾಗಿದ್ದಾಗಿ ಹೇಳಿದ್ದಾಳೆ. ಅಲ್ಲದೇ ಈ ಹುಡುಗನನ್ನು ಮದ್ವೆಯಾಗಲು ಮನೆ ಬಿಟ್ಟು ಓಡಿ ಬಂದಿದ್ದಾಗಿಯೂ ಆಕೆ ತಿಳಿಸಿದ್ದಾಳೆ.
Click