ಕ್ರೈಂದೇಶ-ವಿದೇಶವೈರಲ್ ನ್ಯೂಸ್

15 ದಿನದ ಶಿಶುವನ್ನು ಜೀವಂತವಾಗಿ ಮಣ್ಣಲ್ಲಿ ಹೂತ ತಂದೆ..! ಪೊಲೀಸರ ಮುಂದೆ ಆತ ಹೇಳಿದ್ದೇನು..?

270

ನ್ಯೂಸ್ ನಾಟೌಟ್: ತಂದೆಯೊಬ್ಬ ತನ್ನ 15 ದಿನದ ಮಗಳನ್ನೇ ಜೀವಂತ ಸಮಾಧಿ ಮಾಡಿದ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದದೆ. ಪ್ರಕರಣ ಸಂಬಂಧ ಆರೋಪಿ ತಂದೆ ತಯ್ಯಬ್ ನನ್ನು ಬಂಧಿಸಲಾಗಿದೆ.

ವಿಚಾರಣೆಯ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆರ್ಥಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಮಗಳನ್ನು ಈ ರೀತಿ ಮಾಡಿರುವುದಾಗಿ ತಯ್ಯಬ್‌ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ನವಜಾತ ಮಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿರುವ ಆತ, ನವಜಾತ ಶಿಶುವನ್ನು ಹೂಳುವ ಮುನ್ನ ಗೋಣಿಚೀಲದಲ್ಲಿ ತುಂಬಿದ್ದಾಗಿ ತಯ್ಯಬ್ ಹೇಳಿದ್ದಾನೆ.

ತಯ್ಯಬ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನ್ಯಾಯಾಲಯದ ಸೂಚನೆಯಂತೆ ಸಮಾಧಿಯಿಂದ ಬಾಲಕಿಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ಪರೀಕ್ಷೆಗಾಗಿ ಕಳುಹಿಸಲಾಗಿದೆ.

Click 👇

https://newsnotout.com/2024/07/puri-jagannatha-kannada-news-ratha-devotees-are-j-incident
See also  ಅಫ್ಘಾನಿಸ್ತಾನದಿಂದ ಭಾರತಕ್ಕೆ ಸರಕು ಸಾಗಾಟ ಮಾಡಲು ಅನುಮತಿ ಕೊಟ್ಟ ಪಾಕ್..! ಪಾಕ್‍ ವಿದೇಶಾಂಗ ಸಚಿವಾಲಯದಿಂದ ಪತ್ರ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget