ಕ್ರೈಂಶಿಕ್ಷಣ

14 ವರ್ಷದ ಬಾಲಕಿಯಿಂದ ಸುಳ್ಳು ಲೈಂಗಿಕ ಕಿರುಕುಳದ ಕಥೆ! ಮನಃಶಾಸ್ತ್ರಜ್ಞರಿಂದ ಬಯಲಾಯ್ತು ರಹಸ್ಯ!

ನ್ಯೂಸ್ ನಾಟೌಟ್: ಈಗಿನ ಮಕ್ಕಳು ಎಷ್ಟು ಚುರುಕಾಗಿರುತ್ತಾರೆ ಎಂಬುದಕ್ಕೆ ಇದೊಂದು ಘಟನೆ ಸಾಕ್ಷಿಯಾಗಿದೆ. ಪರೀಕ್ಷೆ ಸರಿಯಾಗಿ ಬರೆಯದ ಕಾರಣ ಪೋಷಕರ ಬೈಗುಳದಿಂದ ತಪ್ಪಿಸಿಕೊಳ್ಳಲು, 14 ವರ್ಷದ ಬಾಲಕಿಯೊಬ್ಬಳು ಸ್ವತಃ ಬ್ಲೇಡ್‌ನಿಂದ ಗಾಯಮಾಡಿಕೊಂಡು, ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಯಿತು ಎಂದು ಸುಳ್ಳು ಕಥೆ ಹೇಳಿದ್ದಾಳೆ. ಈ ಘಟನೆ ಈಶಾನ್ಯ ದೆಹಲಿಯ ಭಜನ್‌ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮಾರ್ಚ್ ೧೫ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

9ನೇ ತರಗತಿ ಓದುತ್ತಿರುವ ಬಾಲಕಿ ಮಾ.15ರಂದು ಸಮಾಜ ವಿಜ್ಞಾನ ವಾರ್ಷಿಕ ಪರೀಕ್ಷೆ ಬರೆದಿದ್ದಳು. ಆದರೆ ಪರೀಕ್ಷೆ ತೃಪ್ತಿಕರವಾಗಿ ಬರೆದಿರಲಿಲ್ಲ. ಕಡಿಮೆ ಅಂಕ ಬಂದರೆ ಪೋಷಕರು ಬೈಯುತ್ತಾರೆ ಎಂದು ಹೆದರಿ, ಸ್ವತಃ ಬ್ಲೇಡ್‌ನಿಂದ ಗಾಯ ಮಾಡಿಕೊಂಡಿದ್ದಾಳೆ ಎಂದು ವರದಿ ತಿಳಿಸಿದೆ.

ನಂತರ ಮೂವರು ಹುಡುಗರು ತನ್ನನ್ನು ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಕಥೆ ಹೇಳಿದ್ದಾಳೆ. ಈ ಸಂಬಂಧ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಪೋಕ್ಸೋ ಕಾಯಿದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.

ಸಿಸಿಟಿವಿ ಪರಿಶೀಲಿಸಿದಾಗ ಬಾಲಕಿ ಒಬ್ಬಳೇ ಇರುವುದು ಗೊತ್ತಾಗಿದೆ. ಅಲ್ಲದೇ ಮನಃಶಾಸ್ತ್ರಜ್ಞರಿಂದ ಕೌನ್ಸೆಲಿಂಗ್‌ ನಡೆಸಿದಾಗ, ಆಕೆ ಸತ್ಯ ಒಪ್ಪಿಕೊಂಡಿದ್ದಾಳೆ. ಹೀಗಾಗಿ ಪ್ರಕರಣವನ್ನು ಹಿಂಪಡೆಯಲಾಗಿದೆ.

Related posts

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ !

ಊಟಕ್ಕೆ ಉಪ್ಪಿನಕಾಯಿ ನೀಡದ ಹೊಟೇಲ್‌ ಮಾಲಿಕನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ..! ಎರಡು ವರ್ಷಗಳ ಬಳಿಕ ಸಿಕ್ತು ಅಚ್ಚರಿಯ ತೀರ್ಪು..!

ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಶಿಕ್ಷಕಿಗೆ ಹೃದಯಾಘಾತ..! ಕೊನೆಯುಸಿರೆಳೆದ ಶಿಕ್ಷಕಿ ಬಗ್ಗೆ ಚುನಾವಣಾಧಿಕಾರಿ ಹೇಳಿದ್ದೇನು..?