ನ್ಯೂಸ್ ನಾಟೌಟ್: ಯುವಕನೊಬ್ಬ ಬಾಲಕಿಯನ್ನು ಎತ್ತಿಕೊಂಡು ಹೋಗುತ್ತಿದ್ದರೆ, ಮತ್ತೊಬ್ಬ ಹಾಗೂ ಮಹಿಳೆಯೊಬ್ಬರು ಆತನ ಹಿಂದೆಯೇ ಹೋಗುತ್ತಿದ್ದಾರೆ. ಯಾರೂ ಬಾಲಕಿಯ ರಕ್ಷಣೆಗೆ ಮುಂದಾಗದೇ ಹದಿನಾಲ್ಕು ವರ್ಷದ ಬಾಲಕಿಯ ಅಳು ಹಾಗೂ ಚೀರಾಟದ ನಡುವೆಯೇ ಕರ್ನಾಟಕದ ಹೊಸೂರಿನಲ್ಲಿ ವಿವಾಹಕ್ಕೆ ಮುಂದಾಗಿದ್ದಾರೆ. ಈ ಘಟನೆಯಲ್ಲಿ 4 ಮಂದಿಯನ್ನು ಬಂಧಿಸಲಾಗಿದೆ.
ತಮಿಳುನಾಡು ಗಡಿಭಾಗ ಹೊಸೂರಿನ ಸಮೀಪದ ತೊಟ್ಟಮಂಜು ಪರ್ವತ ಪ್ರದೇಶದಲ್ಲಿರುವ ತಿಮ್ಮತ್ತೂರು ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಶಾಲೆಯಲ್ಲಿ ಏಳನೇ ತರಗತಿವರೆಗೆ ಓದಿದ್ದ 14 ವರ್ಷದ ಬಾಲಕಿ ಮನೆಯಲ್ಲೇ ಉಳಿದಿದ್ದಳು. ಆದರೆ ಮಾರ್ಚ್ 3ರಂದು ಕರ್ನಾಟಕದ ಕಲಿಕುಟ್ಟೈ ಗ್ರಾಮದ ಮಾದೇಶ ಎಂಬ 29 ವರ್ಷ ವಯಸ್ಸಿನ ಕೂಲಿಕಾರ್ಮಿಕನಿಗೆ ಈಕೆಯನ್ನು ವಿವಾಹ ಮಾಡಿಕೊಡಲಾಗಿತ್ತು.
ಬೆಂಗಳೂರಿನಲ್ಲಿ ಈ ವಿವಾಹ ನಡೆದಿತ್ತು. ಹುಟ್ಟೂರು ತಿಮ್ಮತ್ತೂರಿಗೆ ಮರಳಿದ ಬಳಿಕ ಬಾಲಕಿ ಈ ಮದುವೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾಳೆ, ಗಂಡನಮನೆಗೆ ಹೋಗಲು ನಿರಾಕರಿಸಿದ್ದಳು. ಆದರೆ ಯಾರೂ ಆಕೆಯ ಮಾತು ಕೇಳದೆ, ಮಾದೇಶ್ ಹಾಗೂ ಆತನ ಅಣ್ಣ ಮಲ್ಲೇಶ್ ಬಲವಂತವಾಗಿ ಕಲಿಕುಟ್ಟೈ ಗ್ರಾಮದಲ್ಲಿರುವ ಬಾಲಕಿಯ ಸಂಬಂಧಿಕರ ಮನೆಯಿಂದ ಆಕೆಯನ್ನು ಎತ್ತಿಕೊಂಡು ಹೋಗಿದ್ದರು. ಇದನ್ನು ನೋಡಿದ ಸ್ಥಳೀಯರು ಮೊಬೈಲ್ ಗಳಲ್ಲಿ ವೀಡಿಯೊ ಚಿತ್ರೀಕರಿಸಿ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
14 வயது சிறுமிக்கு வலுக்கட்டாயமாக திருமணம் செய்து வைத்த தாய்.. திருமணத்தில் விருப்பம் இல்லை என கூறி பிறந்த வீட்டிற்கு வந்த சிறுமியை தூக்கி சென்ற கணவர்.. பரபரப்பு காட்சி#Hosur | #ChildMarriage | #Mother | #Husband | #Police | #Arrested pic.twitter.com/UjVkpfNUFS
— Polimer News (@polimernews) March 6, 2025
ಬಾಲಕಿಯ ಅಜ್ಜಿ ಈ ಬಗ್ಗೆ ಅಧಿಕೃತ ದೂರು ನೀಡಿದ್ದು, ದೆಂಕನಿಕೊಟ್ಟೈ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಬುಧವಾರ ಪೊಲೀಸರು ಮಾದೇಶ, ಆತನ ಅಣ್ಣ ಮಲ್ಲೇಶ, ಬಾಲಕಿಯ ತಾಯಿ ನಾಗಮ್ಮ ಅವರನ್ನು ಬಂಧಿಸಿದ್ದಾರೆ. ಗುರುವಾರ ನಸುಕಿನಲ್ಲಿ ಬಾಲಕಿಯ ತಂದೆ ಹಾಗೂ ಮಲ್ಲೇಶನ ಪತ್ನಿಯನ್ನು ಬಂಧಿಸಲಾಗಿದೆ.