Latestಕ್ರೈಂದೇಶ-ವಿದೇಶ

ನಕಲಿ ಮದ್ಯ ಸೇವಿಸಿ 14 ಜನ ಸಾವು..! 5 ಮಂದಿ ಅರೆಸ್ಟ್

483

ನ್ಯೂಸ್‌ ನಾಟೌಟ್‌: ಪಂಜಾಬ್‌ ನ ಅಮೃತಸರದ ಐದು ಗ್ರಾಮಗಳಲ್ಲಿ ನಕಲಿ ಮದ್ಯ ಸೇವಿಸಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಂಗಳವಾರ(ಮೇ.13) ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಲಾಗಿದೆ.

ಕಳ್ಳಭಟ್ಟಿ ಸೇವನೆಯಿಂದ ಅಸ್ವಸ್ಥಗೊಂಡ ಆರು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಂಗಲಿ, ಪಾತಾಳಪುರಿ, ಮರಾರಿ ಕಲಾನ್, ಥೆರೆವಾಲ್ ಮತ್ತು ತಲ್ವಾಂಡಿ ಘುಮಾನ್ ಎಂಬ ಐದು ಗ್ರಾಮಗಳಲ್ಲಿ ಸಾವುಗಳು ಸಂಭವಿಸಿವೆ. ಅಮೃತಸರ ಉಪ ಆಯುಕ್ತೆ ಸಾಕ್ಷಿ ಸಾಹ್ನಿ ಮಾತನಾಡಿ 14 ಮಂದಿ ಸಾವನ್ನು ದೃಢಪಡಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ ಮತ್ತು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೋದಿ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಬೆಂಗಳೂರಿನ ಯುವಕ ಅರೆಸ್ಟ್..! ಆತನ ವಿಡಿಯೋದಲ್ಲೇನಿತ್ತು..?

See also  ಕಡಬ:B.Sc ನರ್ಸಿಂಗ್ ವಿದ್ಯಾರ್ಥಿನಿ ಹಠಾತ್ ಕುಸಿದು ಬಿದ್ದು ಮೃತ್ಯು, ಮುದ್ದಿನ ಮಗಳನ್ನು ಕಳೆದುಕೊಂಡು ಮುಗಿಲು ಮುಟ್ಟಿದ ಪೋಷಕರ ರೋಧನ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget