Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಮನುಷ್ಯರನ್ನು ಕೊಂದು ಮೆದುಳು ತಿನ್ನುತ್ತಿದ್ದ ವಿಚಿತ್ರ ಕೊಲೆಗಾರನಿಗೆ ಜೀವಾವಧಿ ಶಿಕ್ಷೆ..! 14 ಜನರನ್ನು ಕೊಂದ ಆರೋಪ..!

1.5k

ನ್ಯೂಸ್ ನಾಟೌಟ್: ಮನುಷ್ಯರನ್ನು ಕೊಂದು ರಕ್ತ ಕುಡಿದು, ಮೆದುಳು ತಿನ್ನುತ್ತಿದ್ದ ಹಂತಕ ರಾಮ್ ನಿರಂಜನ್ ಕೋಲ್ ಅಲಿಯಾಸ್ ರಾಜಾ ಕೋಲಂದರ್ ಎಂಬ ವಿಚಿತ್ರ ಕೊಲೆಗಾರನಿಗೆ​ ಲಕ್ನೋ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. 2000ರಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಲಕ್ನೋ ನ್ಯಾಯಾಲಯವ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡವನ್ನು ವಿಧಿಸಿದೆ.

2000 ರಲ್ಲಿ ನಡೆದ ಪತ್ರಕರ್ತ ಮನೋಜ್ ಸಿಂಗ್ ಮತ್ತು ಅವರ ಚಾಲಕ ರವಿ ಶ್ರೀವಾಸ್ತವ್ ಕೊಲೆಗೆ ಸಂಬಂಧಿಸಿದಂತೆ ಆರೋಪಿಯನ್ನು ದೋಷಿ ಎಂದು ಘೋಷಿಸಿದ್ದಾರೆ, ಆದರೆ ಆರೋಪಿ ಮುಖದಲ್ಲಿ ಯಾವುದೇ ಪಶ್ಚಾತಾಪ ಕಾಣಿಸಲಿಲ್ಲ ಬದಲಾಗಿ, ಕುಹಕ ನಗು ಇತ್ತು ಎನ್ನಲಾಗಿದೆ. ರಾಜ ಕೊಲಂದರ್ 14 ಜನರನ್ನು ಕೊಂದ ಆರೋಪ ಹೊತ್ತಿದ್ದಾನೆ. ಲಕ್ನೋದ ಸಿಜೆಎಂ ನ್ಯಾಯಾಲಯ ಶುಕ್ರವಾರ(ಮೇ.23) ರಾಜಾ ಕೊಲಂದರ್ ಮತ್ತು ಸೋದರ ಮಾವ ವಕ್ಷರಾಜ್‌ ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಲಕ್ನೋದಿಂದ ಟ್ಯಾಕ್ಸಿಯಲ್ಲಿ ರಾಯ್ ಬರೇಲಿಗೆ ಕರೆದೊಯ್ದು 2 ವ್ಯಕ್ತಿಗಳನ್ನು ಕಾಡಿನಲ್ಲಿ ಕೊಲೆ ಮಾಡಲಾದ ಪ್ರಕರಣದ ಬಳಿಕ ಇವರ ಕೃತ್ಯ ಬೆಳಕಿಗೆ ಬಂದಿತ್ತು. ಘಟನೆ ನಡೆದು ಕೆಲವು ದಿನಗಳ ನಂತರ ಬರ್ಗಢ ಕಾಡಿನಲ್ಲಿ ಬೆತ್ತಲೆ ಶವಗಳು ಪತ್ತೆಯಾಗಿದ್ದವು. ರಾಜಾ ಕುಲಂದರ್ ಪ್ರಯಾಗರಾಜ್‌ ನ ನೈನಿ ಪ್ರದೇಶದ ನಿವಾಸಿ. 2000 ಇಸವಿಯಲ್ಲಿ ಪತ್ರಕರ್ತ ಧೀರೇಂದ್ರ ಸಿಂಗ್ ಅವರ ಹತ್ಯೆಯ ತನಿಖೆ ನಡೆಸಿದಾಗ, ಅವರ ಮನೆಯಲ್ಲಿ ಅಸ್ಥಿಪಂಜರಗಳು ಮತ್ತು ಮಾನವ ತಲೆಬುರುಡೆಗಳು ಪತ್ತೆಯಾಗಿದ್ದವು.

ತನಿಖೆಯಲ್ಲಿ ಆರೋಪಿಯು ತನ್ನ ಮಾನಸಿಕ ಶಕ್ತಿಯನ್ನು ಹೆಚ್ಚಿಸಲು ತಲೆಬುರುಡೆಗಳನ್ನು ಕುದಿಸಿ ಅದರ ಸೂಪ್ ಕುಡಿಯುತ್ತಿದ್ದನು ಎಂದು ತಿಳಿದುಬಂದಿದೆ. ಕೊಲೆಯ ನಂತರ ಲೂಟಿ ಮಾಡಲಾದ ಟಾಟಾ ಸುಮೋವನ್ನು ಅವರು ತಮ್ಮ ಪತ್ನಿ ಫೂಲನ್ ದೇವಿಯವರ ಜಿಲ್ಲಾ ಪಂಚಾಯತ್ ಚುನಾವಣಾ ಪ್ರಚಾರದ ಸಮಯದಲ್ಲಿಯೂ ಬಳಸಿದ್ದ, ರಾಜಾಗೆ ಅದಾಲತ್ ಮತ್ತು ಜಮಾನತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ಕುಟುಂಬವು ಅವನನ್ನು ನಿರಪರಾಧಿ ಎಂದು ಪರಿಗಣಿಸುತ್ತದೆ. ಆದರೆ ಆತ ವಾಸವಿರುವ ಪ್ರದೇಶದ ಜನರು ಆತನ ಹೆಸರನ್ನು ಕೇಳಿದರೆ ಇನ್ನೂ ನಡುಗುತ್ತಾರೆ. ಪತ್ರಕರ್ತ ಧೀರೇಂದ್ರ ಸಿಂಗ್ ಕುಟುಂಬವು ನ್ಯಾಯಾಲಯದ ತೀರ್ಪಿನಿಂದ ತೃಪ್ತರಾಗಿದ್ದರೂ, ಸಂಪೂರ್ಣ ನ್ಯಾಯ ಇನ್ನೂ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಆರೋಪಿಯ ಬಗ್ಗೆ ಹಲವು ವಿಕೃತ ಕೊಲೆಗಳ ಕಥೆಯೇ ಇವೆ ಎನ್ನಲಾಗಿದೆ.

See also  ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಯುವಕ-ಯುವತಿಗೆ ಜೈಲಿನಲ್ಲೇ ಚಿಗುರಿದ ಪ್ರೀತಿ, ಪೆರೋಲ್‌ನಲ್ಲಿ ಬಿಡುಗಡೆಯಾಗಿ ಮದುವೆಯಾದ ಜೋಡಿ ಹೇಳಿದ್ದೇನು?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget