ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

13 ವರ್ಷದ ವಿದ್ಯಾರ್ಥಿ ಜೊತೆ ಸೆಕ್ಸ್‌..! ಹಲವು ವರ್ಷಗಳ ಬಳಿಕ ರಹಸ್ಯ ಬಯಲು, ಮಗು ಪಡೆದ ಶಿಕ್ಷಕಿ ಅರೆಸ್ಟ್ ..!

ನ್ಯೂಸ್ ನಾಟೌಟ್: 13 ವರ್ಷದ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆತನಿಂದ ಗರ್ಭ ಧರಿಸಿ ಮಗು ಹೆತ್ತಿರುವ ಅಮೆರಿಕದ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ.

ಯುನೈಟೆಡ್ ಸ್ಟೇಟ್ಸ್‌ ನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯನ್ನು, ತನ್ನ 13 ವರ್ಷದ ಹಳೆ ವಿದ್ಯಾರ್ಥಿಯೊಂದಿಗೆ ಮಗುವನ್ನು ಹೊಂದಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ವಿದ್ಯಾರ್ಥಿ ಆಕೆಯೊಂದಿಗೆ ಹಲವು ವರ್ಷಗಳಿಂದ ವಾಸಿಸುತ್ತಿದ್ದ. ನ್ಯೂಜೆರ್ಸಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಲಾರಾ ಕ್ಯಾರನ್, 2016 ಮತ್ತು 2020 ರ ನಡುವೆ ತನ್ನ ಮನೆಯಲ್ಲಿ ವಿದ್ಯಾರ್ಥಿ ಜೊತೆ ವಾಸವಾಗಿದ್ದಳು. ಆತನೊಂದಿಗೆ ಅನುಚಿತ ಲೈಂಗಿಕ ಸಂಬಂಧ ಹೊಂದಿದ್ದಳು.

5ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಕ್ಯಾರನ್‌ ಗೆ ವಿದ್ಯಾರ್ಥಿಯ ಪರಿಚಯವಾಗಿತ್ತು. ವಿದ್ಯಾರ್ಥಿಯ ಮನೆ ಶಿಕ್ಷಕಿಯಿದ್ದ ನಿವಾಸಕ್ಕೆ ಹತ್ತಿರದಲ್ಲೇ ಇತ್ತು. 2016 ರ ಸಂದರ್ಭದಲ್ಲಿ ಶಿಕ್ಷಕಿ ಕ್ಯಾರನ್‌ ಮನೆಯಲ್ಲಿ ಕೆಲವು ದಿನ ಉಳಿಯಲು ವಿದ್ಯಾರ್ಥಿ ಪೋಷಕರು ಬಿಟ್ಟಿದ್ದರು.

ಆ ಸಮಯದಲ್ಲಿ ಕ್ಯಾರನ್ ತನ್ನ ವಿದ್ಯಾರ್ಥಿನಿಯೊಂದಿಗೆ ಅನುಚಿತ ಲೈಂಗಿಕ ಸಂಬಂಧ ಹೊಂದಿದ್ದಳು. ಬಳಿಕ ಗರ್ಭ ಧರಿಸಿ, 2019 ರಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ತೀವ್ರ ಲೈಂಗಿಕ ದೌರ್ಜನ್ಯ, ಬಾಲಕನ ಯೋಗಕ್ಷೇಮಕ್ಕೆ ಅಪಾಯವನ್ನುಂಟು ಮಾಡಿದ ಆರೋಪಗಳ ಮೇಲೆ ಶಿಕ್ಷಕಿಯನ್ನು ಪೊಲೀಸರು ಈಗ(ಜ,15) ಬಂಧಿಸಿದ್ದಾರೆ.
ಈ ಘಟನೆಯು ಸಂತ್ರಸ್ತ ಹುಡುಗನ ತಂದೆ ಡಿಸೆಂಬರ್ 2024 ರಲ್ಲಿ ಫೇಸ್ ಬುಕ್ ಮೂಲಕ ಈ ವಿಷಯ ಬಹಿರಂಗ ಪಡಿಸಿದ ಬಳಿಕ ತನಿಖೆ ನಡೆದು ಆರೋಪ ಸಾಭೀತಾಗಿದೆ.

Click

https://newsnotout.com/2025/01/america-white-house-kannad-anews-8-year-jail-d/
https://newsnotout.com/2025/01/forest-department-investigation-kannada-news-5-to-6-hour/
https://newsnotout.com/2025/01/mangaluru-scooter-and-tempo-collision-kannada-news-man-nomore/
https://newsnotout.com/2025/01/darshan-thugudeepa-and-gang-kannada-news-supreme-court/

Related posts

ಎಲ್ಲೇ ಇದ್ದರೂ ಕೂಡಲೇ ಸ್ವದೇಶಕ್ಕೆ ಬಾ, ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ ಎಂದು ಪ್ರಜ್ವಲ್‌ಗೆ ಖಡಕ್ ವಾರ್ನಿಂಗ್ ಕೊಟ್ಟ ಹೆಚ್‌.ಡಿ.ಡಿ..! ಹೆಚ್.ಡಿ.ದೇವೇಗೌಡರು ಹಂಚಿಕೊಂಡ ಪತ್ರದಲ್ಲೇನಿದೆ..?

ದಂಪತಿಯಿಂದ ನಿಗೂಢ ಕಲೆಗಳ ಅಭ್ಯಾಸದ ಶಂಕೆ! ಮರಕ್ಕೆ ನೇತು ಹಾಕಿ ಬೆತ್ತದಿಂದ ಹೊಡೆದ ಗ್ರಾಮಸ್ಥರು! ಏನಿದು ವಿಚಿತ್ರ ಘಟನೆ?

ಪವಿತ್ರಾಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಖಡಕ್​ ಎಚ್ಚರಿಕೆ..!’ಇನ್ಮುಂದೆ ಸುಮ್ಮನಿರಲ್ಲ’ವೆಂದು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್,ಪೋಸ್ಟ್‌ನಲ್ಲೇನಿದೆ?