ನ್ಯೂಸ್ ನಾಟೌಟ್: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಗೆ ಈಗ 82 ವರ್ಷ. ಅಮಿತಾಭ್ ಬಚ್ಚನ್ 2024-25ನೇ ಸಾಲಿನಲ್ಲಿ ಎಷ್ಟು ತೆರಿಗೆ ಪಾವತಿ ಮಾಡಿದ್ದಾರೆ ಎಂಬ ವಿಚಾರ ರಿವೀಲ್ ಆಗಿದೆ. ಬರೋಬ್ಬರಿ 120 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ. ಈ ಮೂಲಕ ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ಹೀರೋ ಎನಿಸಿಕೊಂಡಿದ್ದಾರೆ.
ಅಮಿತಾಭ್ ಬಚ್ಚನ್ ಹಂತ ಹಂತವಾಗಿ ತೆರಿಗೆ ಪಾವತಿ ಮಾಡಿದ್ದಾರೆ. ಕೊನೆಯ ಕಂತಿನಲ್ಲಿ ಅವರು 52.50 ಕೋಟಿ ರೂಪಾಯಿ ಪಾವತಿ ಮಾಡಿದ್ದಾರೆ. ಮಾರ್ಚ್ 15ರಂದು ಅಮಿತಾಭ್ ಇದನ್ನು ಕಟ್ಟಿದ್ದಾರೆ. ಅಮಿತಾಭ್ ಬಚ್ಚನ್ ‘ಕೌನ್ ಬನೇಗಾ ಕರೋಡ್ಪತಿ’ ಸೀಸನ್ 16 ಅನ್ನು ನಡೆಸಿಕೊಟ್ಟಿದ್ದಾರೆ. ಇದು ಅವರ ಆದಾಯದ ದೊಡ್ಡ ಮೂಲವಾಗಿದೆ ಎಂದು ವರದಿ ತಿಳಿಸಿದೆ.
82ನೇ ವಯಸ್ಸಿನಲ್ಲೂ ಅಮಿತಾಭ್ ಬಚ್ಚನ್ ಬೇಡಿಕೆ ಉಳಿಸಿಕೊಂಡಿದ್ದಾರೆ. ಈ ಆರ್ಥಿಕ ವರ್ಷದಲ್ಲಿ (2024-25) ಅಮಿತಾಭ್ ಬಚ್ಚನ್ ಅವರು 350 ಕೋಟಿ ರೂಪಾಯಿ ಸಂಪಾದಿಸಿದ್ದಾರೆ. ಇದರಲ್ಲಿ ಬ್ರ್ಯಾಂಡ್ ಗಳ ಪ್ರಚಾರ, ಸಿನಿಮಾ ಸಂಭಾವನೆ ಕೂಡ ಸೇರಿದೆ.
ಕಳೆದ ವರ್ಷ ಅಮಿತಾಭ್ ಬಚ್ಚನ್ 72 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡಿದ್ದರು. ಈ ಬಾರಿ ಅವರ ಗಳಿಕೆಯಲ್ಲಿ ತೀವ್ರ ಗತಿಯಲ್ಲಿ ಏರಿಕೆ ಕಂಡಿದೆ. ಭಾರತದ ಶ್ರೀಮಂತ ನಟ ಶಾರುಖ್ ಖಾನ್ ಅವರು ಬರೋಬ್ಬರಿ 92 ಕೋಟಿ ರೂಪಾಯಿ ತೆರಿಗೆ ಪಾವತಿಸಿ ಈ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿ ಇದ್ದಾರೆ.
ಇದನ್ನೂ ಓದಿ: ಪತ್ನಿಯ ಮಾಂಗಲ್ಯ ಸರ ಕದ್ದು ಓಡಿದವರನ್ನು ಬೆನ್ನಟ್ಟಿದ ಪತಿಯನ್ನು ಕಲ್ಲಿನಿಂದ ಜಜ್ಜಿದ ಕ್ರೂರಿಗಳು..! ಪ್ರಕರಣ ದಾಖಲು..!