ಕ್ರೈಂದೇಶ-ವಿದೇಶವೈರಲ್ ನ್ಯೂಸ್

12 ವರ್ಷದ ಬಾಲಕನನ್ನು ರೈಲ್ವೆ ಹಳಿಗೆ ಕಟ್ಟಿಹಾಕಿ ಥಳಿತ..! ಬಾಲಕನನ್ನು ರಕ್ಷಿಸಿದ ಪೊಲೀಸರು

ನ್ಯೂಸ್ ನಾಟೌಟ್: ಕಳ್ಳತನ ಮಾಡಿರುವ ಆರೋಪದ ಮೇಲೆ 12 ವರ್ಷದ ಬಾಲಕನನ್ನು ರೈಲು ಹಳಿಗೆ ಕಟ್ಟಿ ಮನ ಬಂದಂತೆ ಥಳಿಸಿರುವ ಘಟನೆ ಬಿಹಾರದ ಜಾನೀಪುರದಲ್ಲಿ ಭಾನುವಾರ(ಜುಲೈ.14) ನಡೆದಿದೆ.

ಬಲ್ಲಿಯಾ ಎಂಬಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಜಾನಿಪುರ್ ಗ್ರಾಮದಲ್ಲಿರುವ ಅಂಗಡಿಯೊಂದರಲ್ಲಿ ಬಾಲಕ ಕಳ್ಳತನ ನಡೆಸಿದ್ದಾನೆ ಎಂದು ವ್ಯಕ್ತಿಯೋರ್ವ ಬಾಲಕನನ್ನು ರೈಲ್ವೆ ಹಳಿಗೆ ಕಟ್ಟಿ ಹಾಕಿ ಕೋಲಿನಿಂದ ಮನಬಂದಂತೆ ಥಳಿಸಿದ್ದಾನೆ, ಘಟನೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬಲ್ಲಿಯಾ ಡಿಎಸ್ಪಿ ನೇಹಾ ಕುಮಾರಿ ಸೂಚನೆ ಮೇರೆಗೆ ಬಲ್ಲಿಯಾ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಬಾಲಕನನ್ನು ರಕ್ಷಣೆ ಮಾಡಿ ಠಾಣೆಗೆ ಕರೆತಂದಿದ್ದಾರೆ ಎನ್ನಲಾಗಿದೆ.

ಬಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಜಾನಿಪುರ ಗ್ರಾಮದ ರೋಷನ್ ಕುಮಾರ್, ಜೈ ಜೈ ರಾಮ್ ಚೌಧರಿ ಮತ್ತು ರಾಹುಲ್ ಕುಮಾರ್ ಎಂಬ ಮೂವರನ್ನು ಬಂಧಿಸಲಾಗಿದೆ.

Click 👇

https://newsnotout.com/2024/07/koragajja-kola-at-kuttaru-kannada-newskatrina-kaif-kl-rahul
https://newsnotout.com/2024/07/fir-kannada-news-bengaluru-rakshith-shetty-copyright-issue
https://newsnotout.com/2024/07/anganwadi-teachers-and-helper-job-vacancy-apply
https://newsnotout.com/2024/07/dk-shivakumar-shoe-kannada-news-dcm-inaguaration-program
https://newsnotout.com/2024/07/kukke-subramanya-temple-rain-kumaradhara-river-flood-situation

Related posts

ಅಕ್ಕ ಪಕ್ಕದ ಮನೆ ಮತ್ತು ದೇಗುಲಗಳಿಂದ ಬ್ರಾಂಡೆಡ್​ ಶೂ ಕದ್ದು ಮಾರುತ್ತಿದ್ದ ದಂಪತಿ..! ಇಲ್ಲಿದೆ ವೈರಲ್ ವಿಡಿಯೋ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ 80 ಮಂದಿ ಅಸ್ವಸ್ಥರಾದದ್ದೇಗೆ? ತಡರಾತ್ರಿ ರೈಲಿನಲ್ಲಿ ನಡೆದದ್ದೇನು..? ಈ ನಿಗೂಢ ಘಟನೆಯ ಬಗ್ಗೆ ರೈಲ್ವೆ ಅಧಿಕಾರಿಗಳು ಹೇಳಿದ್ದೇನು?

ಸೇನಾ ಟ್ರಕ್ ಮೇಲೆ ಉಗ್ರರ ದಾಳಿ..! ಇಬ್ಬರು ಸೈನಿಕರು ಮತ್ತು ಇಬ್ಬರು ಕೂಲಿಯಾಳುಗಳ ದುರಂತ ಅಂತ್ಯ..!