Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

12 ಮದುವೆಯಾಗಿ ಪೊಲೀಸರಿಗೆ ಸಿಕ್ಕಿಬಿದ್ದ 21ರ ಯುವತಿ..! ಗುಜರಾತ್‌ ನಲ್ಲಿ ಕಾಜಲ್, ಹರಿಯಾಣದಲ್ಲಿ ಸೀಮಾ, ಬಿಹಾರದಲ್ಲಿ ನೇಹಾ ಮತ್ತು ಉತ್ತರ ಪ್ರದೇಶದಲ್ಲಿ ಸ್ವೀಟಿ ಅವತಾರ..!

1.1k

ನ್ಯೂಸ್ ನಾಟೌಟ್ : ಇಲ್ಲೊಬ್ಬ ಯುವತಿ ಬರೋಬ್ಬರಿ 12 ಮದುವೆಯಾಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ. ಗುಲ್ಮಾನ ರಿಯಾಜ್ ಖಾನ್ ಎಂಬಾಕೆಯನ್ನು ಲಕ್ನೋದ ಅಂಬೇಡ್ಕ‌ರ್ ನಗರದ ಪೊಲೀಸರು ಬಂಧಿಸಿದ್ದಾರೆ. ಗುಜರಾತ್‌ ನಲ್ಲಿ ಕಾಜಲ್, ಹರಿಯಾಣದಲ್ಲಿ ಸೀಮಾ, ಬಿಹಾರದಲ್ಲಿ ನೇಹಾ ಮತ್ತು ಉತ್ತರ ಪ್ರದೇಶದಲ್ಲಿ ಸ್ವೀಟಿ ಎಂಬ ಹೆಸರು ಇಟ್ಟುಕೊಂಡು ಬರೋಬ್ಬರಿ 12 ಮಂದಿಗೆ ವಂಚಿಸಿದ್ದಾಳೆ.
ದುಡ್ಡಿನ ಆಸೆಗೆ ಬಿದ್ದು ಹುಡುಗರ ಜೊತೆಗೆ ಮದುವೆಯಾಗಿ ಚಿನ್ನಾಭರಣವನ್ನು ದೋಚಿ ಎಸ್ಕೇಪ್​ ಆಗುತ್ತಿದ್ದಳು. ಕೇವಲ 21ನೇ ವಯಸ್ಸಿನಲ್ಲಿ ಒಂದು ಡಜನ್ ಹುಡುಗರಿಗೆ ಮದುವೆಯಾಗಿ ಮೋಸ ಮಾಡಿದ್ದಾಳೆ. ಈಕೆ ಎಂಟು ಜನರ ಗ್ಯಾಂಗ್ ಅನ್ನು ಕಟ್ಟಿಕೊಂಡು ವಂಚನೆ ಮಾಡುತ್ತಿದ್ದು ಬೆಳಕಿಗೆ ಬಂದಿದೆ.

ಬಂಧಿತರನ್ನು ಹರಿಯಾಣದ ಜಿಂದ್‌ ನ ಮೋಹನ್‌ ಲಾಲ್ (34), ಚೌನ್‌ ಪುರದ ರತನ್ ಕುಮಾರ್ ಸರೋಜ್ (32), ಚೌನ್‌ ಪುರದ ರಂಜನ್ ಅಲಿಯಾಸ್ ಆಶು ಗೌತಮ್ (22), ಅಂಬೇಡ್ಕರ್ ನಗರದ ರಾಹುಲ್ ರಾಜ್ (30), ಅಂಬೇಡ್ಕರ್ ನಗರದ ಸನ್ನೋ ಅಲಿಯಾಸ್ ಸುನೀತಾ (36), ಅಂಬೇಡ್ಕರ್ ನಗರದ ಪೂನಮ್ (33), ಚೌನ್‌ಪುರದ ಮಂಜು ಮಾಲಿ (29) ಮತ್ತು ಅಂಬೇಡ್ಕರ್ ನಗರದ ರುಖ್ಯರ್ (21) ಆಕೆಯ ಸಂಬಂಧಿಕರಂತೆ ನಟಿಸುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿದ ಪೊಲೀಸ್, ಡಾಕು ದುಲ್ಲನ್ (ಗುಲ್ಮಾನ ರಿಯಾಜ್ ಖಾನ್)​ ಎಂಬ ಈಕೆ ಹರಿಯಾಣದ ರೋಕ್ಟಕ್ ನಿವಾಸಿ ಸೋನು ಎಂಬವರನ್ನು ವಂಚಿಸಿದ ಗ್ಯಾಂಗ್ ಮದುವೆಗೆ 80,000 ರೂ.ಗಳಿಗೆ ಬೇಡಿಕೆ ಇಟ್ಟಿತು. ಮದುವೆಯಾಗದ ಕುಟುಂಬವನ್ನೇ ಈ ಗ್ಯಾಂಗ್​ ಟಾರ್ಗೆಟ್​ ಮಾಡುತ್ತಿತ್ತು. ಹೀಗಾಗಿ ಅಂತಹ ಕುಟುಂಬವನ್ನು ಸಂಪರ್ಕಿಸಿ ಮದುವೆ ಬಗ್ಗೆ ಮಾತಾಡುತ್ತಿದ್ದರು. ಇದಾದ ಬಳಿಕ ತಮ್ಮ ಪ್ಲಾನ್ ​ನಂತೆ ಮದುವೆ ದಿನ ಈ ಗ್ಯಾಂಗ್‌ ವಧುವನ್ನು ಅಪಹರಿಸೋ ನಾಟಕ ಆಡುತ್ತಾರೆ. ಈ ವೇಳೆ ವರ ಕೇಸ್ ದಾಖಲಿಸಿದ್ದಾನೆ. ತನಿಖೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಾಗ ಹೀಗೆಯೇ ಈ ಹಿಂದೆ 11 ವಂಚನೆ ಪ್ರಕರಣ ಮಾಡಿರುವುದು ಬೆಳಕಿಗೆ ಬಂದಿದೆ ಎಂದಿದ್ದಾರೆ.

ಬಂಧಿತ ಮಹಿಳೆ ನಕಲಿ ಗುರುತಿನ ದಾಖಲೆಗಳನ್ನು ನೀಡಿದ್ದಾಳೆ. ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ಪೋರ್ಜರಿ ಸಂಬಂಧಿಸಿದ ಬಿಎನ್‌ಎಸ್‌ನ ವಿವಿಧ ವಿಭಾಗಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸದ್ಯ ಬಂಧಿತ ಆರೋಪಿಗಳಿಂದ 72,000 ರೂ. ನಗದು, ಒಂದು ಮೋಟಾರ್ ಸೈಕಲ್, ಒಂದು ಚಿನ್ನದ ಮಂಗಳಸೂತ್ರ, 11 ಮೊಬೈಲ್ ಫೋನ್‌ಗಳು ಮತ್ತು ಮೂರು ನಕಲಿ ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 163 ಸೆಕ್ಷನ್ ಜಾರಿ ಇರುವಾಗಲೇ ದ್ವೇಷ ಭಾಷಣ ಆರೋಪ..! ಶಾಸಕ‌ ಹರೀಶ್ ಪೂಂಜಾ ವಿರುದ್ಧ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು..!

ಪಾಕ್ ಗೆ ಮತ್ತೆರಡು ನದಿಗಳ ನೀರಿನ ಹರಿವನ್ನು ನಿಲ್ಲಿಸಿದ ಭಾರತ..! ಇಂದು(ಮೇ.4) ಮೋದಿಯನ್ನು ಭೇಟಿಯಾದ ವಾಯುಪಡೆ ಮುಖ್ಯಸ್ಥ..!

See also  ಜತೆಗಿದ್ದ ಅಣ್ಣನಿಗೆ ಥಳಿಸಿ ತಂಗಿಯನ್ನು ಎಳೆದೊಯ್ದು ಅತ್ಯಾಚಾರ,ಇಬ್ಬರು ಕಾಮುಕರನ್ನು ಬಂಧಿಸಿದ ಪೊಲೀಸರು

ಮೈಸೂರು ಚಾಮುಂಡೇಶ್ವರಿ ದೇವಾಲಯದ ಸುತ್ತ-ಮುತ್ತ ವ್ಯಾಪಾರಕ್ಕೆ ನಿರ್ಬಂಧ..! ದೇವಾಲಯದ ಅಭಿವೃದ್ಧಿ ಪ್ರಾಧಿಕಾರದಿಂದ ಆದೇಶ

ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾಗಿದ್ದ CRPF​ ಯೋಧ ಸೇವೆಯಿಂದ ವಜಾ..! ವೀಸಾ ಅವಧಿ ಮುಗಿದಿದ್ದರೂ ಆಕೆಯನ್ನು ಭಾರತದಲ್ಲೇ ಬಚ್ಚಿಟ್ಟಿದ್ದ ಜವಾನ..!

ಸುಹಾಸ್‌ ಶೆಟ್ಟಿ ಹತ್ಯೆಯ ಬೆನ್ನಲ್ಲೇ ಮತ್ತೊಬ್ಬ ಹಿಂದೂ ಮುಖಂಡನಿಗೆ ಜೀವ ಬೆದರಿಕೆ..! ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್..!

  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget