ಕ್ರೈಂದೇಶ-ವಿದೇಶವೈರಲ್ ನ್ಯೂಸ್

12 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ..! ಶ್ರೀಲಂಕಾ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಶಾಕಿಂಗ್ ಮಾಹಿತಿ ಬಯಲು..!

ನ್ಯೂಸ್ ನಾಟೌಟ್: ‘ಸಮುದ್ರದ ಗಡಿ ದಾಟಿ ಮೀನುಗಾರಿಕೆಯಲ್ಲಿ ತೊಡಗಿದ್ದ 12 ಮಂದಿ ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಬಂಧಿಸಿದ್ದು, ದ್ವೀಪರಾಷ್ಟ್ರದಲ್ಲಿ ಈ ವರ್ಷ ಬಂಧನಕ್ಕೆ ಒಳಗಾದ ಭಾರತೀಯ ಮೀನುಗಾರರ ಸಂಖ್ಯೆ 462ಕ್ಕೆ ಏರಿಕೆಯಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೋಟ್‌ಗಳನ್ನು ವಶಪಡಿಸಿಕೊಂಡು, ಉತ್ತರ ಪ್ರಾಂತ್ಯದ ಜಾಫ್ನಾ, ಪೆಡ್ರೊ ಕರಾವಳಿಯಲ್ಲಿ ಭಾರತೀಯ ಮೀನುಗಾರರನ್ನು ಶ್ರೀಲಂಕಾ ಬಂಧಿಸಿದೆ.

‘ಶ್ರೀಲಂಕಾ ನೌಕಾಪಡೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಈ ಮೀನುಗಾರರನ್ನು ಬಂಧಿಸಲಾಗಿದ್ದು, ಕಂಕಸಂತುರೈ ಎಂಬ ಹೆಸರಿನ ಬಂದರಿಗೆ ಕರೆದೊಯ್ಯಲಾಗಿದೆ ಎಂದು ವರದಿ ತಿಳಿಸಿದೆ. ಇದೇ ವರ್ಷ ಶ್ರೀಲಂಕಾ ನೌಕಾಪಡೆಯು 62 ಭಾರತೀಯ ಮೀನುಗಾರಿಕಾ ದೋಣಿಗಳನ್ನು ವಶಕ್ಕೆ ಪಡೆದಿದೆ ಮತ್ತು 462 ಭಾರತೀಯ ಮೀನುಗಾರರನ್ನು ಬಂಧಿಸಿ ಕಾನೂನು ಕ್ರಮಕ್ಕಾಗಿ ಅಧಿಕಾರಿಗಳಿಗೆ ಹಸ್ತಾಂತರಿಸಿದೆ ಎಂದು ಶ್ರೀಲಂಕಾ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪಾಕ್‌ ಜಲಸಂಧಿಯು ತಮಿಳುನಾಡು ಹಾಗೂ ಶ್ರೀಲಂಕಾ ನಡುವೆ ಸಮುದ್ರಮಾರ್ಗವನ್ನು ಪ್ರತ್ಯೇಕಿಸುತ್ತದೆ. ಹೆಚ್ಚು ಮೀನು ಸಿಗುವ ಕಾರಣ, ಎರಡೂ ರಾಷ್ಟ್ರಗಳ ಮೀನುಗಾರರ ನಡುವೆ ಈ ಸ್ಥಳಗಳಲ್ಲಿ ಆಗಾಗ ತಿಕ್ಕಾಟ ನಡೆಯುತ್ತವೆ ಎನ್ನಲಾಗಿದೆ.

Click

https://newsnotout.com/2024/10/kannada-news-kodagu-and-hyderabad-link-in-case-kannada-news-d-kushalnagara/
https://newsnotout.com/2024/10/4-month-later-ekta-gupta-and-gym-traner-case-revealed/
https://newsnotout.com/2024/10/railway-kannada-news-viral-news-bandra-railway-station-mumbai/
https://newsnotout.com/2024/10/belekeri-mining-issue-7-year-jail-mla-sathish-sail-kannada-news-s/
https://newsnotout.com/2024/10/selfy-kannada-news-elephant-kannada-news-elephant/
https://newsnotout.com/2024/10/udupi-railway-box-sakaleshpura-man-nomnore-kannada-news/
https://newsnotout.com/2024/10/10-th-class-boy-and-frinds-who-are-tailers-are-nomore/

Related posts

ಸಿ.ಟಿ.ರವಿ ಬಿಡುಗಡೆಯ ಬಳಿಕ ಸ್ವಾಗತ ಕೋರಿದ್ದ 7 ಆ್ಯಂಬುಲೆನ್ಸ್​ ವಿರುದ್ಧ FIR ದಾಖಲು..! ಏನಿದು ಘಟನೆ..?

ಈ ರಾಜ್ಯದಲ್ಲಿ ಐದು ವರ್ಷಗಳಲ್ಲಿ 41 ಸಾವಿರಕ್ಕೂ ಹೆಚ್ಚು ಮಹಿಳೆಯರು ನಾಪತ್ತೆ! ಏನಿದು ಬೆಚ್ಚಿಬೀಳಿಸುವ ಅಂಕಿ-ಅಂಶ!

ಸುಳ್ಯ: ಕೆಲಸಕ್ಕೆಂದು ಬಂದವ ಮೊಬೈಲ್ ಮತ್ತು ಬೈಕ್‌ ಕದ್ದು ಪರಾರಿ..! ಇಲ್ಲಿದೆ ಸಂಪೂರ್ಣ ಮಾಹಿತಿ