Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

11 ವರ್ಷದ ಬಾಲಕನ ಹೊಟ್ಟೆಯಲ್ಲಿ 100ಗ್ರಾಂ ಚಿನ್ನದ ಗಟ್ಟಿ..! ಏನಿದು ಘಟನೆ..?

2.4k

ನ್ಯೂಸ್‌ ನಾಟೌಟ್‌: ಸಣ್ಣ ಮಕ್ಕಳು ನಾಣ್ಯ, ಬಾಟಲಿ ಮುಚ್ಚಳ ನುಂಗಿರುವ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಹಾಗೆಯೇ 11 ವರ್ಷದ ಬಾಲಕನೊಬ್ಬ ಚಿನ್ನದ ಗಟ್ಟಿ ನುಂಗಿದ್ದು, ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ಘಟನೆಯು ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ನಡೆದಿದೆ.

ಈ ಬಾಲಕನ ಹೊಟ್ಟೆ ಊದಿಕೊಂಡಿರುವ ಬಗ್ಗೆ ಅನುಮಾನಗೊಂಡ ಪೋಷಕರು ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆಯಲ್ಲಿ ವೈದ್ಯರು ಎಕ್ಸ್-ರೇ ಮಾಡಿದ್ದು ಬಾಲಕನ ಹೊಟ್ಟೆಯಲ್ಲಿ ಘನ ಲೋಹದ ವಸ್ತುವೊಂದು ಸಿಲುಕಿಕೊಂಡಿರುವುದು ತಿಳಿದು ಬಂದಿದೆ. ಆ ಬಳಿಕ ಸ್ಕ್ಯಾನ್ ಮಾಡಿ ನೋಡಿದಾಗ 100 ಗ್ರಾಂ ತೂಕದ ಚಿನ್ನದ ಗಟ್ಟಿ ಇರುವುದು ಕಂಡು ವೈದ್ಯರೇ ಶಾಕ್ ಆಗಿದ್ದಾರೆ. ಶಸ್ತ್ರಚಿಕಿತ್ಸೆ ಅಗತ್ಯವಿಲ್ಲದೇ ಈ ಚಿನ್ನದ ಗಟ್ಟಿಯು ಮಲದ ಮೂಲಕ ಹೊರ ಹೋಗಲು ಸಾಧ್ಯವಾಗುವಂತೆ ಔಷಧಿಯನ್ನು ನೀಡಿದ್ದಾರೆ.

ಇದಾದ ಎರಡು ದಿನಗಳ ಬಳಿಕ ಮತ್ತೆ ಸ್ಕ್ಯಾನ್‌ ನಲ್ಲಿ ಪರೀಕ್ಷಿಸಿದ ವೇಳೆ ಚಿನ್ನದ ಗಟ್ಟಿಯು ಬಾಲಕನ ಹೊಟ್ಟೆಯಲ್ಲೇ ಇರುವುದು ತಿಳಿದು ಬಂದಿದೆ. ಔಷಧಿಯಿಂದ ಯಾವುದೇ ಪ್ರಯೋಜನವಾಗದ ಕಾರಣ ವೈದ್ಯರು ಶಸ್ತ್ರ ಚಿಕಿತ್ಸೆಗೆ ಮುಂದಾಗಿದ್ದಾರೆ. ಹುಡುಗನಿಗೆ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿದ್ದ ಚಿನ್ನದ ಗಟ್ಟಿಯನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಹುಡುಗನ ಆರೋಗ್ಯದಲ್ಲಿ ಬಹುಬೇಗನೆ ಚೇತರಿಕೆ ಕಂಡಿದ್ದಾನೆ.

ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ನಡೆದ ಫೈರಿಂಗ್ ಪ್ರಕರಣಕ್ಕೆ ಟ್ವಿಸ್ಟ್ ..! ಜೊತೆಗಿದ್ದವರಿಂದಲೇ ಕೃತ್ಯ..? ಗನ್ ಮ್ಯಾನ್ ಪೊಲೀಸ್ ವಶಕ್ಕೆ..!

“ನೀನ್ ಹೊರಗೆ ಸಿಗು ನೋಡ್ಕೊತೀನಿ….”ಎಂದು ಎಲ್ಲರೆದುರು ಕೋರ್ಟ್ ನಲ್ಲಿ ನ್ಯಾಯಾಧೀಶೆಗೆ ಜೀವ ಬೆದರಿಕೆ..! ನಿವೃತ್ತ ಶಿಕ್ಷಕನಿಗೆ 1.10 ವರ್ಷ ಜೈಲು..!

See also  215 ಕಿ.ಮೀ. ವೇಗದಲ್ಲಿ ಲಂಬೋರ್ಗಿನಿ ಓಡಿಸಿದ ರೋಹಿತ್ ಶರ್ಮಾ..! ಶಾಕ್ ಕೊಟ್ಟ ಮುಂಬೈ ಪೊಲೀಸರು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget