ನ್ಯೂಸ್ ನಾಟೌಟ್ : 10 ವರ್ಷದ ಬಾಲಕನೊಬ್ಬ ತನ್ನ ಒಂದು ವರ್ಷದ ತಂಗಿಯನ್ನು ಇಟ್ಟಿಗೆ ಮತ್ತು ದೊಣ್ಣೆಯಿಂದ ಹೊಡೆದು ಹತ್ಯೆಗೈದ ಘಟನೆ ಗುರುವಾರ (ಫೆ.27) ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ರೆಹುವಾ ಮನ್ಸೂರ್ ಎಂಬ ಗ್ರಾಮದಲ್ಲಿ ನಡೆದಿದೆ.
ಮಾನಸಿಕ ಅಸ್ವಸ್ಥನಾಗಿರುವ ಬಾಲಕನು ತನ್ನ ತಂಗಿಯೊಂದಿಗೆ ಮನೆಯೊಳಗೆ ಆಡುತ್ತಿದ್ದನು. ಈ ಸಂದರ್ಭ ದೊಣ್ಣೆ ಮತ್ತು ಇಟ್ಟಿಗೆಯ ತುಂಡಿನಿಂದ ಆಕೆಯ ಮುಖಕ್ಕೆ ಹೊಡೆದಿದ್ದಾನೆ. ಹೊಡೆತದ ರಭಸಕ್ಕೆ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಅಜ್ಜ ರಮಾನಂದ್ ಮಿಶ್ರಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ಧಾರೆ.
ಸದ್ಯ ರಾಮಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.