ಕ್ರೈಂದೇಶ-ವಿದೇಶವೈರಲ್ ನ್ಯೂಸ್

10ನೇ ತರಗತಿ ಬಾಲಕ ಸೇರಿ ಜತೆಯಲ್ಲಿ ಮಲಗಿದ್ದ 4 ಮಂದಿ ಸ್ನೇಹಿತರು ಸುಟ್ಟು ಕರಕಲು..! ಟೈಲರ್‌ ಗಳಾಗಿ ದುಡಿಯುತ್ತಿದ್ದ ಯುವಕರ ದುರಂತ ಅಂತ್ಯ..!

165

ನ್ಯೂಸ್ ನಾಟೌಟ್: ಬೆಂಕಿ ಅವಘಡ ಸಂಭವಿಸಿ ಒಂದೇ ಕೋಣೆಯಲ್ಲಿ ಮಲಗಿದ್ದ ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಗುರುಗ್ರಾಮದ ಸರಸ್ವತಿ ಎನ್‌ ಕ್ಲೇವ್‌ ನಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ (ಅ.25ರಂದು) ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಅಮನ್ (17), ಸಾಹಿಲ್ (22), ನೂರ್ ಆಲಂ (27), ಮತ್ತು ಮೊಹಮ್ಮದ್ ಮುಷ್ತಾಕ್ (28) ಎಂದು ಗುರುತಿಸಲಾಗಿದೆ.

ಮೃತರು ಬಿಹಾರದ ನಿವಾಸಿಗಳಾಗಿದ್ದು, ಬಾಡಿಗೆ ಮನೆಯ ಕೋಣೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ.
ಅಮನ್ 10ನೇ ತರಗತಿ ವಿದ್ಯಾರ್ಥಿಯಾಗಿದ್ದು, ಇತರರು ಗಾರ್ಮೆಂಟ್ ರಫ್ತು ಕಂಪನಿಯಲ್ಲಿ ಟೈಲರ್‌ ಗಳಾಗಿ ಕೆಲಸ ಮಾಡುತ್ತಿದ್ದರು ಎಂದು ವರದಿ ತಿಳಿಸಿದೆ.
ನಾಲ್ವರು ಒಂದೇ ಕೋಣೆಯಲ್ಲಿ ಮಲಗಿದ್ದರು ಈ ವೇಳೆ ಆಕಸ್ಮಿಕವಾಗಿ ಕೋಣೆಗೆ ಬೆಂಕಿ ತಗುಲಿದೆ. ಎಚ್ಚರವಾದಾಗ ಸಮಯ ಮೀರಿತ್ತು, ನಾಲ್ವರು ಹೊರಗೆ ಬರಲಾರದೆ ಸಿಲುಕಿಕೊಂಡಿದ್ದಾರೆ. ಬೆಂಕಿ ತಗುಲಿ ನಾಲ್ವರು ಅಲ್ಲೇ ಸುಟ್ಟುಕರಕಲಾಗಿದ್ದಾರೆ ಎಂದು ವರದಿ ತಿಳಿಸಿದೆ.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಘಟನೆ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Click

https://newsnotout.com/2024/10/4-month-later-ekta-gupta-and-gym-traner-case-revealed/
https://newsnotout.com/2024/10/railway-kannada-news-viral-news-bandra-railway-station-mumbai/
https://newsnotout.com/2024/10/belekeri-mining-issue-7-year-jail-mla-sathish-sail-kannada-news-s/
https://newsnotout.com/2024/10/selfy-kannada-news-elephant-kannada-news-elephant/
https://newsnotout.com/2024/10/udupi-railway-box-sakaleshpura-man-nomnore-kannada-news/
See also  ಮಂಗಳೂರು: ಪ್ರಧಾನಿ ಮೋದಿಯನ್ನು ಸ್ವಾಗತಿಸಿದ್ದ ಪ್ರವೀಣ್ ನೆಟ್ಟಾರ್ ತಾಯಿ, ವೈರಲ್ ಆಗುತ್ತಿದೆ ಫೋಟೋ
  Ad Widget   Ad Widget   Ad Widget   Ad Widget   Ad Widget   Ad Widget   Ad Widget