ಕರಾವಳಿಸುಳ್ಯ

10 ರೂ. ನಾಣ್ಯದಿಂದಲೇ 1 ಲಕ್ಷ ರೂ. ಸಂಗ್ರಹಿಸಿ ಸ್ಕೂಟಿ ಖರೀದಿಸಿದ ಮಹಿಳೆ..! ಚಿಲ್ಲರೆ ರಾಶಿಯನ್ನು ಕಂಡು ದಂಗಾದ ಶೋ ರೂಮ್ ಸಿಬ್ಬಂದಿ..!

ನ್ಯೂಸ್ ನಾಟೌಟ್ :ಎಲ್ಲರಿಗೂ ಒಂದಲ್ಲ ಒಂದು ರೀತಿಯ ಹವ್ಯಾಸ ಇದ್ದೇ ಇರುತ್ತದೆ.ಬಿಡುವು ಸಿಕ್ಕಾಗಲೆಲ್ಲ ಏನಾದರೊಂದು ಚಟುವಟಿಕೆಯಲ್ಲಿ ತೊಡಗಿಕೊಂಡಾಗಲೇ ಮನಸ್ಸಿಗೂ ಒಂದಷ್ಟು ನೆಮ್ಮದಿಯೂ ಸಿಗುತ್ತೆ.ಆದರೆ ಇಲ್ಲೊಬ್ಬರು ಮಹಿಳೆಯಿದ್ದಾರೆ.ಇವರು ೧೦ ರೂ. ನಾಣ್ಯಗಳನ್ನು ಸಂಗ್ರಹಿಸಿಸುವ ಹವ್ಯಾಸವನ್ನು ಬೆಳಸಿಕೊಂಡಿದ್ದಲ್ಲದೇ ಸಂಗ್ರಹವಾಗಿರುವ ಹಣದಿಂದ ಒಂದು ಸ್ಕೂಟಿಯನ್ನೇ ಖರೀದಿಸಿದ್ದಾರೆ..!.

ಹೌದು, ಹತ್ತು ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ಹಲವು ಸಮಯಗಳಿಂದ ಒಂದು ಲಕ್ಷದಷ್ಟು ಹಣ ಸಂಗ್ರಹಿಸಿ,ಆ ಹಣದಿಂದಲೇ ಗಾಡಿ ಖರೀದಿಸುವ ಮೂಲಕ ಮಹಿಳೆಯೊಬ್ಬರು ಗಮನ ಸಳೆದಿದ್ದಾರೆ. ಕೋಟೇಶ್ವರ ಅಂಕದಕಟ್ಟೆಯಲ್ಲಿರುವ ವಿನಾಯಕ್ ಮೊಟಾರ್ಸ್ ಸುಜುಕಿ ಶೋರೂಂನಲ್ಲಿ ರುಬಿನಾ ಬೇಗಂ ಎನ್ನುವ ಕುಂದಾಪುರ ಮೂಲದ ಗ್ರಾಹಕಿ ಒಂದು ಲಕ್ಷ ಬೆಲೆಯ ಸುಜುಕಿ ಆ್ಯಕ್ಸಸ್ 125 ಗಾಡಿಯನ್ನು ಹತ್ತು ರೂಪಾಯಿ ಮುಖಬೆಲೆಯ ಹತ್ತು ಸಾವಿರ ನಾಣ್ಯಗಳನ್ನು ನಗದು ರೂಪದಲ್ಲಿ ನೀಡಿ ಖರೀದಿ ಮಾಡಿದ್ದಾರೆ. ಕೇವಲ ಹತ್ತು ರೂಪಾಯಿ ಕಾಯಿನ್‍ಗಳ ಸಂಗ್ರಹಿಸುವಾಗ ಬೈಕ್ ಕನಸು ಕಂಡಿದ್ದ ಮಹಿಳೆ ಕಡೆಗೂ ಆ ಹಣದಿಂದಲೇ ಬೈಕ್ ಖರೀದಿಸುವ ಸಂಕಲ್ಪವನ್ನುಈಡೇರಿಸಿಕೊಂಡಿದ್ದಾರೆ ಅನ್ನೋದು ವಿಶೇಷ. ಒಂದು ಲಕ್ಷ ಮೌಲ್ಯವನ್ನು ನಾಣ್ಯಗಳ ಮೂಲಕ ತಗೆದುಕೊಳ್ಳುವ ಮೂಲಕ ಶ್ರೀನಿವಾಸ ಮೊಟಾರ್ಸ್ ಸುಜುಕಿ ಶೋರೂಂನ ರಾಧಾಕೃಷ್ಣ ಅವರು ಹೊಸ ಅನುಭವ ಪಡೆದಿದ್ದಾರೆ. ಈಗಿನ ಗೂಗಲ್ ಪೇ,ಕ್ಯಾಶ್,ಚೆಕ್ ಭರಾಟೆಯಲ್ಲಿ ಬರೀ ನಾಣ್ಯಗಳಿಂದ ಇಷ್ಟು ದೊಡ್ಡ ಮೌಲ್ಯದ ಬೈಕ್ ಖರೀದಿಸುವುದೆಂದರೆ ಅಚ್ಚರಿಯ ವಿಷಯ. ಹತ್ತು ರೂಪಾಯಿ ನಾಣ್ಯ ಒಂದು ಲಕ್ಷ ಮೌಲ್ಯವಾಗಲು 10 ಸಾವಿರ ನಾಣ್ಯ ಆಗುತ್ತದೆ.ಅದನ್ನು ಎಣಿಕೆ ಮಾಡುವುದಕ್ಕೆ ಕನಿಷ್ಟ ಅಂದರೂ ಅರ್ಧ ಗಂಟೆಗಳಾದರೂ ಬೇಕು.ನಾಣ್ಯಗಳನ್ನು ಎಣಿಸುವುದು ಕೂಡಾ ಒಂದು ಸವಾಲೇ ಸರಿ. ಇದರ ಒಟ್ಟು ತೂಕ ಸುಮಾರು 80 ಕೆಜಿ ಆಗಿತ್ತಂತೆ! ಸಂಸ್ಥೆಯ ಮಾಲಕರು, ಸಿಬ್ಬಂದಿಗಳು ಇದನ್ನು ಖುಷಿಯಿಂದ ಸ್ವೀಕರಿಸಿದ್ದಾರೆ.ಅಂತು ಮಹಿಳೆಯ ಬಹುದಿನಗಳ ಕನಸು ನನಸಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

Related posts

ಸುಳ್ಯ: ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಸಂಭ್ರಮದ ಆಚರಣೆ

ಕಡಬ: ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಪ್ರಯಾಣಿಕರು..!,’ಬಸ್ಸಿನಿಂದ ಅರ್ಧ ಜನ ಇಳೀರಿ,ಬಸ್ಸನ್ನು ಮುಂದಕ್ಕೆ ಚಲಾಯಿಸಲ್ಲ’ ಎಂದ ಚಾಲಕ..!; ಮುಂದೇನಾಯ್ತು?

ಬೆಳ್ತಂಗಡಿ:ಚಾರ್ಮಾಡಿ ಘಾಟಿ ಬಳಿ ದುರಂತ-ಕಂದಕಕ್ಕೆ ಉರುಳಿ ಬಿದ್ದ ಕಾರು,ಓರ್ವ ಮಹಿಳೆ ಮೃತ್ಯು-ಉಜಿರೆ ಗ್ರಾ.ಪಂ. ಅಧ್ಯಕ್ಷೆ ಸೇರಿದಂತೆ ನಾಲ್ಕು ಮಂದಿಗೆ ಗಂಭೀರ ಗಾಯ