ನ್ಯೂಸ್ ನಾಟೌಟ್: ಹಾವು ಕಡಿತದಿಂದ ವ್ಯಕ್ತಿ ಸತ್ತಿದ್ದಾನೆಂದು ಬಿಂಬಿತವಾಗಿದ್ದ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಮರಣೋತ್ತರ ಪರೀಕ್ಷೆ ವೇಳೆ ಅದು ಹಾವು ಕಡಿತವಲ್ಲ ಕೊಲೆ ಎಂದು ತಿಳಿದುಬಂದಿದೆ.
ಮೀರತ್ ನ ಅಕ್ಬರ್ ಪುರ್ ಸಾದತ್ ಗ್ರಾಮದ ಅಮಿತ್ ಎಂಬಾತ ಬೆಳಗಾಗುವಷ್ಟರಲ್ಲಿ ಶವವಾಗಿ ಪತ್ತೆಯಾಗಿದ್ದ. ಆತನ ಹಾಸಿಗೆ ಮೇಲೆ ಹಾವಿತ್ತು, ಕೈಯಲ್ಲಿ ಹಾವು ಹಚ್ಚಿದ್ದ 10 ಗಾಯಗಳಿತ್ತು. ಹೀಗಾಗಿ ಮೇಲ್ನೋಟಕ್ಕೆ ಅದು ಹಾವು ಕಡಿತದಿಂದಾದ ಸಾವೆಂದು ಹೇಳಿದ್ದರೂ ಕೂಡ ಹಾವು ಕಚ್ಚಿ ಓಡಿ ಹೋಗದೆ ಅಲ್ಲೇ ಇರುವುದು ಅನುಮಾನ ಸೃಷ್ಟಿಸಿತ್ತು. ಅಮಿತ್ ಬೆಡ್ ಮೇಲೆ ಶವವಾಗಿ ಮಲಗಿದ್ದ, ಪಕ್ಕದಲ್ಲಿ ಹಾವಿತ್ತು, ಕೂಡಲೇ ಹಾವಾಡಿಗನನ್ನು ಕರೆಸಿ ಹಾವನ್ನು ಹಿಡಿಸಲಾಯಿತು. ಅಷ್ಟರೊಳಗೆ ದೇಹ ಹಸಿರುಗಟ್ಟಿತ್ತು.
ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಅಷ್ಟರೊಳಗೆ ಉಸಿರುಚೆಲ್ಲಿದ್ದ. ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲಿ ಬಂದ ವರದಿಯಲ್ಲಿ ಅಮಿತ್ ಸಾವು ಹಾವಿನ ಕಡಿತದಿಂದಾಗಿಲ್ಲ, ಹಾವು ಕಡಿದಿರುವ 10 ಗಾಯಗಳಿವೆ, ಅದರ ಜತೆಗೆ ದೇಹದಲ್ಲೂ ಬೇರೆ ಗಾಯಗಳಿವೆ. ಉಸಿರುಗಟ್ಟಿಸುವಿಕೆಯಿಂದ ಅವರ ಸಾವಾಗಿದೆ ಎಂದು ವೈದ್ಯಕೀಯ ವರದಿ ತಿಳಿಸಿದೆ.
ಆಗ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಮಿತ್ ಪತ್ನಿ ರವಿತಾಳಿಗೆ ಮೃತ ಅಮಿತ್ ಎಂಬಾತನ ಆಪ್ತ ಸ್ನೇಹಿತನೂ ಆಗಿದ್ದ ಆಕೆಯ ಪ್ರಿಯಕರ ಅಮರದೀಪ್ ಸಹಾಯದಿಂದ ಅವರ ಕೊಲೆಗೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ರವಿತಾ ಅಮರದೀಪ್ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾಳೆಂದು ಪೊಲೀಸರಿಗೆ ತನಿಖೆಯ ವೇಳೆ ತಿಳಿದಿದೆ.
#Meerut में सांप को झूठा बदनाम करने वाली पत्नी खुद ही नहीं निकली हत्यारिन,
उसने अपने प्रेमी संग मिलकर पति अमित की गला दबाकर हत्या की उसे हादसे का रूप देने के लिए सपेरे से वाइपर स्नेक खरीदा और उसे पति के लाश के नीचे दबा दिया, सांप ने डेड बॉडी को 10 बार डंसा, पुलिस ने पोस्टमार्टम… pic.twitter.com/0tmQ5yFX0D
— Lokesh Rai (@lokeshRlive) April 17, 2025
ತನ್ನ ಗಂಡನನ್ನು ಕೊಲ್ಲಲು ಮತ್ತು ಅನುಮಾನ ಬರದಂತೆ ತಡೆಯಲು, ರವಿತಾ ಎಚ್ಚರಿಕೆಯಿಂದ ಕೊಲೆಗೆ ಸಂಚು ರೂಪಿಸಿದ್ದಳು. 1,000 ರೂ.ಗೆ ಹಾವನ್ನು ಖರೀದಿಸಿ, ಅಮಿತ್ ಅವರನ್ನು ಕತ್ತು ಹಿಸುಕಿ ಕೊಂದು, ನಂತರ ಹಾವನ್ನು ಅವನ ದೇಹದ ಕೆಳಗೆ ಇಟ್ಟಿದ್ದಳು ಮತ್ತು ಆತನ ದೇಹದ ಮೇಲೆ ಕೃತಕ ಹಲ್ಲಿನ ಗುರುತು ಮಾಡಲಾಗಿದೆ ಎನ್ನಲಾಗಿದೆ.
50 ಕೋಟಿ ರೂ. ದುಬಾರಿ ಬೆಲೆಯ ನಾಯಿ ಖರೀದಿಸಿದ್ದು ನಿಜಾನಾ?!! ಬೆಂಗಳೂರಿಗನ ಬಂಡವಾಳ ಬಯಲು ಮಾಡಿದ ಇಡಿ!