Latestದೇಶ-ವಿದೇಶವೈರಲ್ ನ್ಯೂಸ್

ಭಾರತ 5G ಯಲ್ಲಿರುವಾಗ ಚೀನಾದಲ್ಲಿ 10G ಬ್ರಾಡ್‌ ಬ್ಯಾಂಡ್ ನೆಟ್‌ ವರ್ಕ್ ಗೆ ಚಾಲನೆ, 20 ಜಿಬಿ ಗಾತ್ರದ 4k ಫೈಲ್ ಕೇವಲ 20 ಸೆಕೆಂಡ್ ನಲ್ಲಿ ಡೌನ್ ಲೋಡ್..!

603

ನ್ಯೂಸ್ ನಾಟೌಟ್: ಚೀನಾ ಕಳೆದ ಭಾನುವಾರ ವಿಶ್ವದ ಮೊಟ್ಟಮೊದಲ 10ಜಿ ಬ್ರಾಡ್ ಬ್ಯಾಂಡ್ ನೆಟ್ ವರ್ಕ್ ಆರಂಭಿಸಿದೆ. ಹೆಬೀ ಪ್ರಾಂತ್ಯದ ಸುನಾನ್ ನಗರದಲ್ಲಿ ಈ ಸೇವೆಗೆ ಚಾಲನೆ ನೀಡಲಾಗಿದೆ.
ಹ್ಯುವೀ ಮತ್ತು ಚೀನಾ ಯುನಿಕಾಂ ಸಹಯೋಗದಲ್ಲಿ 9834 ಎಂಬಿಪಿಎಸ್ ಡೌನ್ ಲೋಡ್ ವೇಗ ನೀಡುವ ಗುರಿ ಹೊಂದಿದ ಮತ್ತು 1008 ಎಂಬಿಪಿಎಸ್ ಅಪ್ ಲೋಡ್ ಸ್ಪೀಡ್ ಸಾಧಿಸುವ ಸೇವೆಯನ್ನು ಆರಂಭಿಸಿದೆ. ಇದರಿಂದಾಗಿ ಕಾಯುವಿಕೆ ಅವಧಿ ಕೇವಲ 3 ಮಿಲಿ ಸೆಕೆಂಡ್ ಗೆ ಇಳಿಯಲಿದೆ.

50 ಜಿ ಪ್ಯಾಸಿವ್ ಆಪ್ಟಿಕಲ್ ನೆಟ್ವರ್ಕ್ (ಪಿಎನ್ ಓ) ತಂತ್ರಜ್ಞಾನವು 10ಜಿ ನೆಟ್ ವರ್ಕ್ ಗೆ ಆಧಾರವಾಗಲಿದ್ದು, ಇದು ಹಾಲಿ ಇರುವ ಫೈಬರ್ ಆಪ್ಟಿಕ್ ಮೂಲಸೌಕರ್ಯಕ್ಕೆ ಹೋಲಿಸಿದರೆ ಡಾಟಾ ವರ್ಗಾವಣೆಯನ್ನು ತೀವ್ರ ಗತಿಯಲ್ಲಿ ಸುಧಾರಿಸಲಿದೆ. ಅಧಿಕ ಬ್ಯಾಂಡ್ ವಿಡ್ತ್ ಈ ತಂತ್ರಜ್ಞಾನದಲ್ಲಿ ಬಳಕೆಯಾಗಲಿದ್ದು, ಕ್ಲೌಡ್ ಕಂಪ್ಯೂಟಿಂಗ್, ವರ್ಚುವಲ್ ಮತ್ತು ಅಗ್ಯುಮೆಂಟೆಡ್ ರಿಯಾಲಿಟಿ, 8ಕೆ ವಿಡಿಯೊ ಸ್ಟ್ರೀಮಿಂಗ್ ಮತ್ತು ಸ್ಮಾರ್ಟ್ ಗೃಹ ಸಾಧನಗಳ ಸಮನ್ವಯತೆಯನ್ನು ಒಳಗೊಂಡಿದೆ.

ಉದಾಹರಣೆಗೆ ಅಂದಾಜು 20 ಜಿಬಿ ಗಾತ್ರದ 4ಕೆ ಉದ್ದದ ಚಲನಚಿತ್ರವೊಂದನ್ನು 1ಜಿಬಿಪಿಎಸ್ ಸಂಪರ್ಕದಲ್ಲಿ 7-10 ನಿಮಿಷಗಳಲ್ಲಿ ಡೌನ್ ಲೋಡ್ ಮಾಡಬಹುದಾಗಿದೆ. ಇದೀಗ ಹೊಸ 10ಜಿ ಬ್ರಾಡ್ ಬ್ಯಾಂಡ್ ನೆಟ್ ವರ್ಕ್ ನಲ್ಲಿ ಇದೇ 4ಕೆ ಚಲನಚಿತ್ರವನ್ನು ಕೇವಲ 20 ಸೆಕೆಂಡ್ ಗಳಲ್ಲಿ ಡೌನ್ ಲೋಡ್ ಮಾಡಬಹುದಾಗಿದೆ.

ಚೀನಾ ಜಾಗತಿಕ ಬ್ರಾಡ್ ಬ್ಯಾಂಡ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದು, ಹಾಲಿ ಯುಎಇ ಮತ್ತು ಕತಾರ್ ನಂತಹ ದೇಶಗಳಲ್ಲಿರುವ ವಾಣಿಜ್ಯ ಬ್ರಾಡ್ ಬ್ಯಾಂಡ್ ನ ವೇಗವನ್ನು ಮೀರಲಿದೆ.

3 ವರ್ಷದ ಮಗುವಿನ ಮೇಲೆ ಮನೆ ಮಾಲೀಕನ ಮಗನಿಂದ ಅತ್ಯಾಚಾರ..! ಆ ಮಗುವಿನ ಕುಟುಂಬ ಆರೋಪಿಯ ಮನೆಯಲ್ಲಿ ಬಾಡಿಗೆಗಿದ್ದರು..!

See also  ಬಾಂಗ್ಲಾ ದೇಶದ ನೀಲಿ ಚಿತ್ರ ನಟಿ ಭಾರತದಲ್ಲಿ ಬಂಧನ..! ನಕಲಿ ದಾಖಲೆಗಳ ಜೊತೆ ಹೆಸರು ಬದಲಿಸಿಕೊಂಡು ಭಾರತದಲ್ಲಿ ವಾಸ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget