ನ್ಯೂಸ್ ನಾಟೌಟ್: ಇನ್ಮುಂದೆ10 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಅಪ್ರಾಪ್ತರು ಬ್ಯಾಂಕ್ ಖಾತೆ ತೆರೆಯಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
ಏ.21 ರಂದು ಹೊರಡಿಸಿರುವ ಈ ಹೊಸ ನಿರ್ದೇಶನದಲ್ಲಿ, 10 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಅಪ್ರಾಪ್ತರು ಆರ್ ಬಿಐ ನ 1976ರ ಸುತ್ತೋಲೆಗೆ ಅನುಗುಣವಾಗಿ ಉಳಿತಾಯ ಮತ್ತು ಅವಧಿ ಠೇವಣಿ ಖಾತೆಗಳನ್ನು ತೆರೆಯಬಹುದು ಎಂದು ತಿಳಿಸಿದೆ.
ಇದೇ ಜುಲೈ 1 ರಿಂದ ಈ ಆದೇಶ ಜಾರಿಗೆ ಬರಲಿದ್ದು, ಎಲ್ಲಾ ಬ್ಯಾಂಕ್ ಗಳು ಈ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ತಿಳಿಸಿದೆ. ಈ ನಿರ್ದೇಶನದ ಅಡಿಯಲ್ಲಿ ಅಪ್ರಾಪ್ತರು ತಮ್ಮ ಪೋಷಕರ ನೆರವಿಲ್ಲದೆ ಸ್ವತಂತ್ರವಾಗಿ ತಮ್ಮ ಖಾತೆಗಳನ್ನು ನಿರ್ವಹಿಸಬಹುದು. 18 ವಯಸ್ಸಿನ ನಂತರ ತಮ್ಮ ಸಹಿ ಮಾದರಿ ಹಾಗೂ ಇನ್ನಿತರ ದಾಖಲೆಗಳನ್ನು ನವೀಕರಿಸಬೇಕು ಎನ್ನಲಾಗಿದೆ.
ಬ್ಯಾಂಕ್ ಖಾತೆಯ ಜೊತೆಗೆ ಇಂಟರ್ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಹಾಗೂ ಚೆಕ್ ಬುಕ್ ಸೇರಿ ಹೆಚ್ಚುವರಿ ಸೇವೆಗಳನ್ನು ಪಡೆಯಬಹುದು. ಇದಕ್ಕೂ ಮೊದಲು ಕೂಡ ಈ ರೀತಿ ಅಪ್ರಾಪ್ತರು ಉಳಿತಾಯ ಖಾತೆಗಳನ್ನು ತೆರೆಯಲು ಅವಕಾಶ ಆರ್ ಬಿಐ ಅವಕಾಶ ನೀಡಿತ್ತು.
ಆದರೆ ಪೋಷಕರ ನೆರವಿನಿಂದಲೇ ಖಾತೆಯನ್ನು ತೆರೆದು, ನಿರ್ವಹಿಸಬೇಕಿತ್ತು ಮತ್ತು ಅಪ್ರಾಪ್ತ ವಯಸ್ಕರ ಖಾತೆಗಳು ಜಾಯಿಂಟ್ ಎಕೌಂಟ್ ಆಗಿತ್ತು.18 ವಯಸ್ಸಿನ ನಂತರವೇ ಅವರು ತಮ್ಮ ಖಾತೆಯನ್ನು ಸ್ವತಂತ್ರವಾಗಿ ನಿರ್ವಹಿಸಲು ಅವಕಾಶವಿತ್ತು. ಜೊತೆಗೆ ಡೆಬಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ನಂತಹ ಇತರ ಬ್ಯಾಂಕಿಂಗ್ ಸೌಲಭ್ಯಗಳು ಲಭ್ಯವಿರಲಿಲ್ಲ. ಸದ್ಯ ಈ ನಿಯಮಗಳಲ್ಲಿ ಬದಲಾವಣೆ ತಂದಿದೆ.
11 ವರ್ಷದ ಬಾಲಕನ ಹೊಟ್ಟೆಯಲ್ಲಿ 100ಗ್ರಾಂ ಚಿನ್ನದ ಗಟ್ಟಿ..! ಏನಿದು ಘಟನೆ..?