Latestಕ್ರೈಂರಾಜ್ಯ

10 ಮತ್ತು 12 ವರ್ಷದ ಮಕ್ಕಳ ಜೊತೆ ತಾಯಿ ನೇಣಿಗೆ ಶರಣು..! ಹುಟ್ಟಿನಿಂದಲೇ ಬುದ್ದಿಮಾಂದ್ಯರಾಗಿದ್ದ ಮಕ್ಕಳು..!

333
Representative image

ನ್ಯೂಸ್ ನಾಟೌಟ್: ಮಹಿಳೆಯೊರ್ವಳು ತನ್ನ ಇಬ್ಬರು ಮಕ್ಕಳ ಜೊತೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನ ಗುಬ್ಬಿ ತಾಲೂಕಿನ ಅದಲಗೆರೆ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ವಿಜಯಲಕ್ಷ್ಮಿ (35), ಮಕ್ಕಳಾದ ಚುಡಾಮಣಿ (12) ಹಾಗೂ ನರಸಿಂಹ (10) ಎಂದು ಗುರುತಿಸಲಾಗಿದೆ.

ಮಕ್ಕಳಿಬ್ಬರು ಹುಟ್ಟಿನಿಂದಲೇ ಬುದ್ದಿಮಾಂದ್ಯರಾಗಿದ್ದು, ಅದೇ ಕೊರಗಿನಲ್ಲಿ ತಾಯಿಯು ಅನಾರೋಗ್ಯ ಪೀಡಿತರಾಗಿದ್ದರು ಎನ್ನಲಾಗಿದೆ.

ಗುರುವಾರ(ಎ.3) ಕುಟುಂಬದ ಯಜಮಾನ ಮಹದೇವಯ್ಯ ಕಾರ್ಯನಿಮಿತ್ತ ತುಮಕೂರಿಗೆ ಹೋಗಿದ್ದ ಸಂದರ್ಭದಲ್ಲಿ ತಾಯಿ ವಿಜಯಲಕ್ಷ್ಮಿ, ತನ್ನ ಮಕ್ಕಳಿಬ್ಬರನ್ನು ಹಗ್ಗದಿಂದ ನೇಣುಹಾಕಿ ನಂತರ ಆಕೆಯೂ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪತಿ ಮಹದೇವಯ್ಯ ಮನೆಗೆ ಬಂದ ನಂತರ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಅಕ್ಕಪಕ್ಕದ ಮನೆಯವರು ಸೇರಿಕೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಚೇಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು

ಇದನ್ನೂ ಓದಿ6 ತಿಂಗಳ ಕಂದನನ್ನು ಹಿಡಿದು ಅಗ್ನಿ ಕುಂಡ ತುಳಿಯುವಾಗ ಜಾರಿ ಬಿದ್ದ ತಂದೆ..! ವಿಡಿಯೋ ವೈರಲ್

See also  ಮೊಬೈಲ್‌ ಫೋನ್‌ಗಾದ ಜಗಳಕ್ಕೆ ಮನೆಯ ಛಾವಣಿಯೇ ಕುಸಿದು ಬಿತ್ತು..!ಛಾವಣಿಯ ಮೇಲೆಯೇ ನಿಂತು ಮಹಿಳೆಯರು, ಪುರುಷರ ಹೊಡೆದಾಟ!! ವಿಡಿಯೋ ವೀಕ್ಷಿಸಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget