ಕರಾವಳಿಜೀವನಶೈಲಿ

ನೀವು ಚಿಕನ್, ಮಟನ್​ ‘ಲಿವರ್’​ ಪ್ರಿಯರಾ? ಹಾಗಾದ್ರೆ ಎಚ್ಚರ! ಈ ವಿಚಾರ ನಿಮಗೆ ಗೊತ್ತಿರ್ಲಿ..

ನ್ಯೂಸ್‌ ನಾಟೌಟ್‌ :ಕೆಲವರಿಗೆ ಕೋಳಿ ಮತ್ತು ಮಟನ್ ಅಂದ್ರೆ ತುಂಬಾ ಇಷ್ಟ. ಅದರಲ್ಲೂ ಅವುಗಳ ಲಿವರ್ ಅಂದ್ರೆ ಇನ್ನೂ ಇಷ್ಟ.ಹೀಗಾಗಿ ಲಿವರ್ ಫ್ರೈ ಮತ್ತು ಲಿವರ್ ಕರಿಯಂತಹ ವಿವಿಧ ಖಾದ್ಯಗಳನ್ನು ಸವಿಯಲು ಇಚ್ಛಿಸುತ್ತಾರೆ. ಅಷ್ಟಕ್ಕೂ ಚಿಕನ್​ ಮತ್ತು ಮಟನ್ ಲಿವರ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ಅಥವಾ ಹಾನಿಕಾರಕವೇ? ಇಲ್ಲಿದೆ ನೋಡಿ ಡಿಟೇಲ್ಸ್‌..

ಚಿಕನ್​ ಲಿವರ್ ಹೇರಳವಾದ ಪೋಷಕಾಂಶಗಳಿವೆ.​ ವಿಟಮಿನ್ ಎ, ಬಿ, ಬಿ12, ಪ್ರೋಟೀನ್​ಗಳು, ಖನಿಜಗಳು, ಕಬ್ಬಿಣ, ಫೋಲೇಟ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ವಿಶೇಷವಾಗಿ ಚಿಕನ್​ ಲಿವರ್​ ಉತ್ತಮ ಪ್ರಮಾಣದ ಸೆಲೆನಿಯಮ್ ಅನ್ನು ಹೊಂದಿರುತ್ತದೆ. ಇದು ಕ್ಯಾನ್ಸರ್ ಅಪಾಯವನ್ನು ಬಹಳಷ್ಟು ಕಡಿಮೆ ಮಾಡುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ.

ಇನ್ನು ಸೆಲೆನಿಯಮ್ ಅಂಶ ಅಸ್ತಮಾ, ಸೋಂಕು, ದೇಹದಲ್ಲಿ ಉರಿಯೂತ ಮತ್ತು ಕೀಲು ನೋವಿನಂತಹ ಸಮಸ್ಯೆಗಳನ್ನು ಸಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ​ ಕಣ್ಣು, ಚರ್ಮ ಮತ್ತು ರಕ್ತಹೀನತೆಯ ಸಮಸ್ಯೆಗಳನ್ನು ತಡೆಯುತ್ತದೆ. ಇದು ವಿಟಮಿನ್ ಬಿ 12ನಲ್ಲಿ ಸಮೃದ್ಧವಾಗಿದ್ದು, ಮೆದುಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಉಪಯುಕ್ತವಾಗಿದೆ.ಇನ್ನೊಂದು ವಿಷಯವೆಂದ್ರೆ ಚಿಕನ್​ ಲಿವರ್​ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುತ್ತದೆ. ಕೊಲೆಸ್ಟ್ರಾಲ್ ಸಮಸ್ಯೆಗಳು ಮತ್ತು ಫ್ಯಾಟಿ ಲಿವರ್​ನಿಂದ ಬಳಲುತ್ತಿರುವ ಜನರು ಇದನ್ನು ಆದಷ್ಟು ತಪ್ಪಿಸಬೇಕು. ಏಕೆಂದರೆ, ಲಿವರ್​ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ಇದರಿಂದ ಹೃದಯ ಕಾಯಿಲೆ ಅಪಾಯವೂ ಹೆಚ್ಚಾಗುತ್ತದೆ.ಮೂತ್ರಪಿಂಡದ ಕಾಯಿಲೆ, ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವ ಜನರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ವೈದ್ಯರ ಸಲಹೆಯ ಮೇರೆಗೆ ಮಾತ್ರ ಇದನ್ನು ಸೇವಿಸಬೇಕು.

ಮಟನ್‌ನ ಲಿವರ್​ ಅತ್ಯಂತ ಪೌಷ್ಟಿಕ ಭಾಗವಾಗಿದೆ. ಇದರಲ್ಲಿ ಜೀವಸತ್ವಗಳು, ಖನಿಜಗಳು, ಪೊಟ್ಯಾಸಿಯಮ್, ಕಬ್ಬಿಣ, ತಾಮ್ರ ಮತ್ತು ಸತುವು ಇರುತ್ತದೆ. ಈ ಮಟನ್ ಲಿವರ್‌ನಲ್ಲಿರುವ ಕಬ್ಬಿಣದ ಅಂಶವು ರಕ್ತಹೀನತೆಯನ್ನು ತಡೆಯುತ್ತದೆ ಮತ್ತು ದೇಹದ ಭಾಗಗಳಿಗೆ ಆಮ್ಲಜನಕವನ್ನು ಪೂರೈಸಲು ಸಹಾಯ ಮಾಡುತ್ತದೆ. ಅಲ್ಲದೆ, ಮಟನ್ ಲಿವರ್ ವಿಟಮಿನ್ ಎ, ಬಿ ಮತ್ತು ಡಿಗಳಲ್ಲಿ ಸಮೃದ್ಧವಾಗಿದೆ. ಇದು ಕಣ್ಣು ಮತ್ತು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಖನಿಜಗಳು ಕಿಣ್ವಗಳ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ರಾಸಾಯನಿಕ ಪ್ರಕ್ರಿಯೆಗಳನ್ನು ಸಮತೋಲನಗೊಳಿಸುತ್ತದೆ. ಮಟನ್ ಲಿವರ್‌ನಲ್ಲಿರುವ ವಿಟಮಿನ್ ಬಿ12 ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ನರ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಮಟನ್ ಲಿವರ್ ತಿನ್ನುವುದರಿಂದ ಪರಿಹಾರವನ್ನು ಪಡೆಯಬಹುದು.ಗರ್ಭಿಣಿಯರು ಮಟನ್ ಲಿವರ್ ತಿನ್ನುತ್ತಿದ್ದರೆ, ಅದು ಭ್ರೂಣದಲ್ಲಿ ಕೇಂದ್ರ ನರಮಂಡಲ, ಕ್ರಾನಿಯೊಫೇಶಿಯಲ್ ಮತ್ತು ಹೃದಯದಲ್ಲಿ ಜನ್ಮ ದೋಷಗಳನ್ನು ಉಂಟುಮಾಡಬಹುದು. ಅಲ್ಲದೆ, ಹೆಚ್ಚಿನ ಕೊಲೆಸ್ಟ್ರಾಲ್ ಇರುವ ಜನರು ಮಟನ್ ಲಿವರ್ ತಿನ್ನಬಾರದು. ಮಟನ್ ಲಿವರ್​ನಲ್ಲಿರುವ ಅಧಿಕ ಕೊಲೆಸ್ಟ್ರಾಲ್ ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಆಸ್ತಮಾ ಸಮಸ್ಯೆಯಿಂದ ಬಳಲುತ್ತಿರುವ ಜನರು ಸಹ ಈ ಮಟನ್ ಲಿವರ್​ನಿಂದ ದೂರವಿರಬೇಕು.

Related posts

ಮೈಕ್ರೋಸಾಫ್ಟ್‌ ನ 365 ಆ್ಯಪ್‌ಗಳು ಮತ್ತು ಸೇವೆಗಳಲ್ಲಿ ತಾಂತ್ರಿಕ ಸಮಸ್ಯೆ..! ಜಗತ್ತಿನಾದ್ಯಂತ ವಿಮಾನಯಾನ, ಬ್ಯಾಂಕಿಂಗ್ ಸೇರಿದಂತೆ ಹಲವು ಸೇವೆಗಳು ವ್ಯತ್ಯಯ..!

ಕೆಲವೇ ಕ್ಷಣಗಳಲ್ಲಿ ನಿರ್ಮಲಾ ಬಜೆಟ್ ಮಂಡನೆ, ರಾಜ್ಯಕ್ಕೆ ಸಿಗುವುದೇ ಮೋದಿ ಸರಕಾರದ ಗಿಫ್ಟ್‌?

ರಾತ್ರೋರಾತ್ರಿ ಇತಿಹಾಸ ಪ್ರಸಿದ್ಧ ಪಿಲಿಚಾಮುಂಡಿ ದೈವಸ್ಥಾನದ ಭಂಡಾರಮನೆ ಧ್ವಂಸ..!ಯಾರು ಆ ಕಿಡಿಗೇಡಿಗಳು?ಘಟನೆಗೆ ಕಾರಣವೇನು?