ನ್ಯೂಸ್ ನಾಟೌಟ್: ವೇಗದಿಂದ ಬಂದ ಕಾರು ಅರಂತೋಡು ಬಳಿ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ನಡೆದಿದೆ.
ಕಾರು ಧರ್ಮಸ್ಥಳದಿಂದ ಮೈಸೂರಿಗೆ ಹೋ ಗುತ್ತಿತ್ತು ಎಂದು ತಿಳಿದು ಬಂದಿದೆ. ಕಾರು ಬಸ್ ಗೆ ಸೈಡು ಕೊಡಲು ಎಡ ಬದಿಗೆ ತಿರುಗಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಕಾರಿನಲ್ಲಿ ಐದು ಮಂದಿ ಇದ್ದು ಯಾರಿಗೂ ಏನು ಅಪಾಯವಾಗಿಲ್ಲ. ಧರ್ಮಸ್ಥಳ ಕ್ಷೇತ್ರ ದರ್ಶನ ಪಡೆದು ಮೈಸೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ.