ಕ್ರೈಂಬೆಂಗಳೂರುವೈರಲ್ ನ್ಯೂಸ್

ಕರ್ನಾಟಕಕ್ಕೆ ಕರಾಳ ಭಾನುವಾರ..! ಸಾಲು..ಸಾಲು ಅಪಘಾತ, ಅಪಾರ ಪ್ರಮಾಣದ ಜೀವ ಹಾನಿ

268

ನ್ಯೂಸ್ ನಾಟೌಟ್: ಭಾನುವಾರ ಕರ್ನಾಟಕದ ಪಾಲಿಗೆ ಕರಾವಳ ದಿನವಾಗಿದೆ. ರಾಜ್ಯದ ವಿವಿಧ ಕಡೆ ಹಲವಾರು ಮಂದಿ ಅಪಘಾತದಲ್ಲಿ ಒಂದೇ ದಿನ ಸಾವಿಗೀಡಾಗಿದ್ದಾರೆ.

ಆಳಂದ ತಾಲೂಕಿನ ಕಡಗಂಚಿ ಬಳಿ ಗೂಡ್ಸ್ ವಾಹನ ಬೈಕ್​ಗೆ ಡಿಕ್ಕಿ ಹೊಡೆದಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಶೋಕ ಇಂಗಳೆ(52), ಸಮಾವುದ್ದೀನ್(15) ಮೃತಪಟ್ಟವರು. ಮೃತರು ಆಳಂದ ಪಟ್ಟಣದ ರೇವಣಸಿದ್ದೇಶ್ವರ ಕಾಲೋನಿ ನಿವಾಸಿಗಳಾಗಿದ್ದಾರೆ. ಗೂಡ್ಸ್ ವಾಹನ ಓವರ್ ಟೇಕ್ ಮಾಡಲು ಹೋಗಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಲಾರಿ ಹಾಗೂ ಎರಡು ಬೈಕ್ ಗಳು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಕಲ್ಲಿಹಾಳ್-ಅರಹತೊಳಲು ಗ್ರಾಮದ ಬಳಿ ನಡೆದಿದೆ. ಒಂದೇ ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಂದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ವಿಕಾಸ್ (18), ಯಶ್ವಂತ (17) ಶಶಾಂಕ (17) ಮೃತಪಟ್ಟ ದುರ್ದೈವಿಗಳು.

ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿಯಾಗಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನ ಜೆಎಸ್ಎಸ್ ಪಾಲಿಟೆಕ್ನಿಕ್ ಕಾಲೇಜು ಬಳಿ ನಡೆದಿದೆ. ನಂಜನಗೂಡಿನ ಈದ್ಗಾ ಮೈದಾನದ ನಿವಾಸಿ ಮುಬಾರಕ್(28) ಮೃತ ದುರ್ವೈವಿ. ಈ ಬಗ್ಗೆ ನಂಜನಗೂಡು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾದಗಿರಿ ನಗರದ ಹೊಸಹಳ್ಳಿ ಕ್ರಾಸ್ ಬಳಿ ಲಾರಿ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಬೈಕ್ ಸವಾರರಾದ ಕೃಷ್ಣ(21), ಆಕಾಶ್​​(19) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಯಾದಗಿರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಬಿಜೆಪಿ ಕಾರ್ಯಕರ್ತ ಅರೆಸ್ಟ್ ..! 2022 ರ ಪ್ರಕರಣಕ್ಕೆ ಮರು ಜೀವ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget