ಕರಾವಳಿ

ಎಲಿಮಲೆ: ವಿಜ್ಞಾನ ಮಾದರಿ ತಯಾರಿ ಸ್ಪರ್ಧೆ ಹಾಗೂ ಅಂತರ್‌ ರಾಜ್ಯ ಸಾಂಸ್ಕ್ರತಿಕ ವಿನಿಮಯ ಕಾರ್ಯಕ್ರಮ

ಸುಳ್ಯ : ಸರಕಾರಿ ಪ್ರೌಢ ಶಾಲೆ ಎಲಿಮಲೆ , ಶಾಲಾಭಿವೃದ್ದಿ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ, ಸಿಸಿಆರ್ ಟಿ ಬಳಗ ಇದರ ಆಶ್ರಯದಲ್ಲಿ  ನವೆಂಬರ್ 26ರಂದು ತಾಲೂಕು ಮಟ್ಟದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆ, ಪ್ರದರ್ಶನ, INSPIRE AWARD ನಾಮನಿರ್ದೇಶಿತ ವಿದ್ಯಾರ್ಥಿಗಳಿಗೆ ಹಾಗೂ ನೋಡಲ್ ಶಿಕ್ಷಕರಿಗೆ  ವಿಜ್ಞಾನ ಮಾದರಿ ತಯಾರಿ ಬಗ್ಗೆ ತರಬೇತಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಾದ ಡಾ. ಯತೀಶ್ ಉಳ್ಳಾಲ್ ಇವರು ವಹಿಸಲಿದ್ದಾರೆ. ಉದ್ಘಾಟನೆಯನ್ನು ಪದ್ಮ ಶ್ರೀ ಪ್ರಶಸ್ತಿ ಪುರಸ್ಕ್ರತ ಗಿರೀಶ ಭಾರದ್ವಾಜ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಲ್ಲೇಸ್ವಾಮಿ  ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ ರಾಮ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ ಎನ್, ಜ್ಞಾನ ದೀಪ ವಿಶ್ವಸ್ಥ ಮಂಡಳಿ ಎಲಿಮಲೆ ಇದರ ಅಧ್ಯಕ್ಷ ಚಂದ್ರಶೇಖರ ಭಟ್, ಕನಾಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸುಳ್ಯ ಇದರ ಅಧ್ಯಕ್ಷರಾದ ಶ್ರೀಧರ ಗೌಡ ಭಾಗವಹಿಸಲಿದ್ದಾರೆ.  

Related posts

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್​​ ಒಡೆಯರ್​ ಬಳಿ ಇರೋ ಆಸ್ತಿ ಎಷ್ಟು?ಇವರ ಬಳಿ ಸ್ವಂತ ಕಾರೂ ಇಲ್ಲ ಗೊತ್ತಾ?!!

ಪುತ್ತೂರು : ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?

ಎಸ್. ಅಬ್ದುಲ್‌ ನಜೀರ್ ಆಂಧ್ರ‍ಪ್ರದೇಶದ ನೂತನ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕಾರ