ನ್ಯೂಸ್ ನಾಟೌಟ್: ಕೆಲವು ಸಲ ನಡೆಯಬಾರದ ಘೋರ ದುರಂತ ನಡೆದು ಬಿಡುತ್ತದೆ. ಹಾಗೆಯೇ ಎಡಮಂಗಲದ ರೈಲ್ವೇ ಟ್ರ್ಯಾಕ್ ನಲ್ಲೂ ನಡೆದಿದೆ.
ಶನಿವಾರ (ಮಾ.17) ರಾತ್ರಿ ಎಡಮಂಗಲ ಮರ್ದೂರಡ್ಕ ಎಂಬಲ್ಲಿ ಸ್ಥಳೀಯ ವಿಶ್ವನಾಥ ಅನ್ನುವವರು ರೈಲ್ವೇ ಟ್ರ್ಯಾಕ್ ನಲ್ಲಿ ಮೊಬೈಲ್ ಹಿಡಿದುಕೊಂಡು ಕುಳಿತಿದ್ದರು. ಈ ವೇಳೆ ರಾತ್ರಿ 10 ಗಂಟೆ ಆಗಿತ್ತು. ಈ ಸಮಯದಲ್ಲಿ ಮಂಗಳೂರು ಕಡೆಯಿಂದ ಬಂದ ಬೆಂಗಳೂರು ರೈಲು ಅವರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಅವರು ಗಂಭೀರ ಗಾಯಗೊಂಡು ಮೃತರಾಗಿದ್ದಾರೆಂದು ತಿಳಿದು ಬಂದಿದೆ.