ಬೆಳ್ಳಾರೆ: ಹಿರಿಯ ಯಕ್ಷಗಾನ ಕಲಾವಿದ ದೈವ ಮಧ್ಯಸ್ಥ ಹಾಗೂ ಮಾಣಿಜಾಲು ಕುಟುಂಬದ ಧರ್ಮದರ್ಶಿ ಬೆಳ್ಳಾರೆ ಗ್ರಾಮದ ನೆಟ್ಟಾರು ಚಂದ್ರಶೇಖರ ಪೂಜಾರಿ ಪಾಂಬಾರು ಅ.15ರಂದು ನಿಧನರಾದರು. ಇವರಿಗೆ 68 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸುಂದರಿ, ಪುತ್ರ ಬೆಳ್ಳಾರೆ ತೌಳವ ಸಂಸ್ಥೆಯ ಮಾಲಿಕ್ ಪ್ರದೀಪ್ ನೆಟ್ಟಾರು, ಪುತ್ರಿಯರಾದ ವನಿತಾ ಚಂದ್ರಶೇಖರ ಕೊಕ್ಕಡ, ಮಮತಾ ಸುಂದರ ದೇರ್ಲ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.