ನ್ಯೂಸ್ ನಾಟೌಟ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಹುಲ್ಲುಗಾವಲಿನಲ್ಲಿ ಎ.22ರಂದು ಭಯೋತ್ಪಾದಕ ದಾಳಿ ನಡೆದಿದೆ.ಈ ದಿನದಿಂದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಂ ಮುನೀರ್ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಕುಟುಂಬ ಸಮೇತ ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದೆ. ಕೆಲ ವರದಿಗಳ ಪ್ರಕಾರ, ಅಸಿಮ್ ಮುನೀರ್ ತನ್ನ ಕುಟುಂಬವನ್ನು ಪ್ರೈವೇಟ್ ಏರ್‌ಕ್ರಾಫ್ಟ್ ಮೂಲಕ ಬ್ರಿಟನ್ ಅಥವಾ ನ್ಯೂ ಜರ್ಸಿಗೆ ಕಳುಹಿರುವ ಬಗ್ಗೆ ವರದಿಯಾಗಿದೆ.
ಪ್ರವಾಸಿಗರು ಸೇರಿ ಒಟ್ಟು 26 ಮಂದಿಯನ್ನು ಬಲಿ ಪಡೆದ ಈ ಭಯೋತ್ಪಾದಕ ಕೃತ್ಯದಲ್ಲಿ ಪಾಕ್ ಉಗ್ರರು ಹಾಗೂ ಇದರ ಹಿಂದೆ ಪಾಕಿಸ್ತಾನದ ಸಂಚು ಅಡಗಿದೆ ಎಂಬ ಆರೋಪದ ಹಿನ್ನೆಲೆ ಸೇನಾ ಮುಖ್ಯಸ್ಥರ ನಾಪತ್ತೆ ಪ್ರಕರಣ ತೀವ್ರ ಕುತೂಹಲ ಕೆರಳಿಸಿದೆ. ವಿಧ್ವಂಸಕ ಕೃತ್ಯ ನಡೆದ ದಿನದಿಂದ ಭಾರತ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳು ಪಾಕಿಸ್ತಾನದಲ್ಲಿನ ಬೆಳವಣಿಗೆ ಮೇಲೂ ಗಮನ ಇರಿಸಿದ್ದಾರೆ. ಈ ನಡುವೆ ಪಾಕ್ ಸೇನಾ ಮುಖ್ಯಸ್ಥರು ಏ.22ರಿಂದ ಇದುವರೆಗೂ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ್ದು ಚರ್ಚೆಗೂ ಗ್ರಾಸವಾಗಿದೆ. ಅಸಿಂ ಮುನೀರ್ ಪಾಕ್ನಲ್ಲಿ ಅಡಗಿರಬಹುದು ಇಲ್ಲವೇ ಪಾಕಿಸ್ತಾನದಿಂದ ಪಲಾಯನ ಮಾಡಿರಬಹುದು ಎನ್ನಲಾಗುತ್ತಿದೆ.