Latest

ತನ್ನ ಗೆಳತಿ ಪಕ್ಕ ಮಲಗಿದ್ದ ಮಾಲೀಕ;ಹಾಸಿಗೆ ಮೇಲೆ ಹಾರಿ ಗುಂಡಿಕ್ಕಿದ ಪಿಟ್‌ಬುಲ್ ನಾಯಿ

1.1k
Spread the love

ನ್ಯೂಸ್‌ ನಾಟೌಟ್: ಅಮೆರಿಕಾದಲ್ಲಿ ಶ್ವಾನವೊಂದು ತನ್ನ ಮಾಲೀಕನಿಗೆ ಗುಂಡಿಕ್ಕಿದ ವಿಚಿತ್ರ ಘಟನೆ ಬಗ್ಗೆ ವರದಿಯಾಗಿದೆ. ಇದು ಹೇಗೆ ಸಾಧ್ಯ ಅಂತ ಆಶ್ಚರ್ಯನಾ?

ಅಮೆರಿಕಾದ ಟೆನ್ನೆಸ್ಸೀಯ ಮೆಂಫಿಸ್‌ನ ವ್ಯಕ್ತಿಯೊಬ್ಬ ಸೋಮವಾರ ಬೆಳಗಿನ ಜಾವ ತನ್ನ ಗೆಳತಿಯ ಪಕ್ಕದಲ್ಲಿ ಮಲಗಿದ್ದ ವೇಳೆ ನಾಯಿ ಗುಂಡು ಹಾರಿಸಿದೆಯಂತೆ.ಈತ ಹಾಸಿಗೆಯಲ್ಲೇ ಲೋಡೆಡ್ ಗನ್ ಇಟ್ಕೊಂದು ಮಲಗಿದ್ದಾನೆ. ಈ ವೇಳೆ ನಾಯಿ ಹಾಸಿಗೆಯೇ ಮೇಲೆ ಹಾರಿದೆ. ನಾಯಿಯ ಕಾಲು ಸೀದಾ ಗನ್ ನಳಿಕೆ ಮೇಲೆ ಬಿದ್ದಿದ್ದೆ, ಇದರಿಂದ ಅಚಾನಕ್ ಆಗಿ ಗುಂಡು ಹಾರಿದೆ. ಪರಿಣಾಮ ತುಂಬಿದ್ದ ಗನ್ ನಿಂದ ಗುಂಡು ಹಾರಿ ಹೋಗಿ ಮಾಲೀಕನ ತೊಡೆ ಸೀಳಿದೆ. ಅದೃಷ್ಟವಶಾತ್ ಆತ ಗಾಯದೊಂದಿಗೆ ಬದುಕುಳಿದಿದ್ದಾನೆ.  ಗುಂಡು ತಗುಲಿದ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಮಾಲೀಕನಿಗೆ ಗುಂಡಿಕ್ಕಿದ ನಾಯಿ

ಅಂದಹಾಗೆ ಹೀಗೆ ತನಗೆ ಗೊತ್ತಿಲ್ಲದೇ ಮಾಲೀಕನಿಗೆ ಗುಂಡಿಕ್ಕಿದ ನಾಯಿ ಪಿಟ್‌ಬುಲ್ ತಳಿಯ ನಾಯಿಯಾಗಿದ್ದು,  ಈ ಪಿಟ್‌ಬುಲ್ ಶ್ವಾನಗಳು ತಮ್ಮ ಅಪಾಯಕಾರಿ ಆಕ್ರಮಣಕ್ಕೆ ಹೆಸರುವಾಸಿಯಾಗಿವೆ. ಇದೇ ಕಾರಣಕ್ಕೆ ಈ ತಳಿಯ ಶ್ವಾನಗಳನ್ನು ಸಾಕುವುದಕ್ಕೆ ಹಲವು ದೇಶಗಳಲ್ಲಿ ನಿಷೇಧವಿದೆ. ಇತ್ತ ಹೀಗೆ ಮಾಲೀಕನಿಗೆ ಗುಂಡಿಕ್ಕಿದ ಶ್ವಾನದ ಹೆಸರು ಓರಿಯೋ, ಮಾಲೀಕನ ಹಾಸಿಗೆಯ ಮೇಲೆ ಈ ಶ್ವಾನ ಹಾರಿದಾಗ ಅದರ ಕಾಲಿನ ಸ್ಪರ್ಶಕ್ಕೆ ಬಂದೂಕು ಟ್ರಿಗರ್ ಆಗಿ ಮಾಲೀಕ ಗಾಯಗೊಂಡಿದ್ದಾನೆ ಎಂದು ಈ ಘಟನೆಯ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಇದೊಂದು ಆಕಸ್ಮಿಕ ಘಟನೆ ಎಂದು ಪೊಲೀಸರು ಹೇಳಿದ್ದಾರೆ.  

See also  ಕಾಸರಗೋಡು: ವಾಟ್ಸ್‌ ಆ್ಯಪ್ ಮೂಲಕ ತ್ರಿವಳಿ ತಲಾಖ್ ನೀಡಿದ ವ್ಯಕ್ತಿ ವಿರುದ್ಧ ಎಫ್.ಐ.ಆರ್..! ಗಲ್ಫ್‌ ನಲ್ಲಿ ಕೆಲಸ ಮಾಡುತ್ತಿರುವ ರಜಾಕ್ ವಿರುದ್ಧ ದೂರು ದಾಖಲು..!
  Ad Widget   Ad Widget   Ad Widget   Ad Widget   Ad Widget   Ad Widget