ಕರಾವಳಿ

ವಿಟ್ಲ ಪಟ್ಟಣ ಪಂಚಾಯಿತಿ ಚುನಾವಣೆ: ಬಿಜೆಪಿಗೆ ಭರ್ಜರಿ ಗೆಲುವು

541

ವಿಟ್ಲ:  ವಿಟ್ಲ ಪಟ್ಟಣ ಪಂಚಾಯಿತಿನ ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಒಟ್ಟು 18 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ  ಬಿಜೆಪಿ 12 ಸ್ಥಾನವನ್ನು ಪಡೆದು ಸ್ಪಷ್ಟ ಗೆಲುವು ಸಾಧಿಸಿದೆ. ಕಾಂಗ್ರೆಸ್ 5  ಹಾಗೂ ಎಸ್ ಡಿ ಪಿ ಐ 1 ಸ್ಥಾನದಲ್ಲಿ ಗೆಲುವು ದಾಖಲಿಸಿದೆ. ಈ ಮೂಲಕ ಮೂರನೇ ಎರಡು ಬಹುಮತ ಪಡೆಯುವ ಮೂಲಕ ಅಧಿಕಾರಯುತವಾಗಿ ವಿಟ್ಲ ಪಟ್ಟಣ ಪಂಚಾಯಿತಿನ ಅಡಳಿತವನ್ನು ಎರಡನೇ ಬಾರಿ ಬಿಜೆಪಿ ಹಿಡಿದಿದೆ.

ಕಾಂಗ್ರೆಸ್ ಮಿತ್ರ ಪಕ್ಷಗಳಿಗೆ ಹೀನಾಯ ಸೋಲು

ಬಿಜೆಪಿ ಒಳ ಜಗಳದ ಲಾಭ ವಾಗುತ್ತದೆ ಎಂಬ ಹವಣಿಕೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುಂಡಿದೆ.  ಕೇವಲ 5 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ, ಇನ್ನು ಎಸ್ ಡಿ ಪಿ ಐ 1 ಸ್ಥಾನ ಪಡೆಯುವ ಮೂಲಕ ವಿಟ್ಲ ಪಟ್ಟಣ ಪಂಚಾಯಿತಿನಲ್ಲಿ ತನ್ನ ಅಸ್ತಿತ್ವವನ್ನು ತೋರಿಸಿದೆ.

See also  ಸುಳ್ಯ: ಆ್ಯಂಬುಲೆನ್ಸ್‌ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ..!
  Ad Widget   Ad Widget   Ad Widget   Ad Widget   Ad Widget