ವಿಟ್ಲ: ಯುವತಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದಲ್ಲಿ ಅಕ್ಟೋಬರ್ 11 ರಂದು ನಡೆದಿದೆ. ಇಲ್ಲಿನ ಸಮೀಪದ ಪಂಚಲಿಗೇಶ್ವರ ದೇವಸ್ಥಾನದ ಸಮೀಪದ ಮನೆಯ ಬಳಿ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ವಿಟ್ಲ ಕಸಬಾ ಗ್ರಾಮದ ನೆತ್ರಕರೆ ನಿವಾಸಿ ಬಾಬು ನಾಯ್ಕ್ ಮಗಳು ನಿಶ್ಚಿತಾ (22 ವರ್ಷ) ಎಂದು ಗುರುತಿಸಲಾಗಿದೆ. ಡೆಂಟಲ್ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ನಿಶ್ಚಿತಾ ನಿನ್ನೆ ಸಂಜೆಯಿಂದ ಕಾಣೆಯಾಗಿದ್ದಳು. ಹುಡುಕಾಡಿದಾಗ ಇಂದು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಡೆತ್ ನೋಟ್ ಬರೆದಿಟ್ಟು ಕೆರೆಗೆ ಹಾರಿದ್ದಾಳೆ. ಡೆತ್ ನೋಟ್ ನಲ್ಲಿ ಹಲವರ ಹೆಸರು ಬರೆದಿಟ್ಟಿದ್ದಾಳೆ ಎನ್ನಲಾಗಿದೆ. ವಿಟ್ಲ ಪೊಲೀಸರು ತನಿಖೆ ಆರಂಭಿಸಿದ್ದಾರೆ.