ವಿಡಿಯೋ

ಅನ್ನ ಹಾಕಿದ ಬ್ರಾಹ್ಮಣನನ್ನೇ ಕೊಂದರೇ ಬಾಂಗ್ಲಾ ಮುಸ್ಲಿಮರು? ವಾಟ್ಸಪ್ ಸುದ್ದಿಯ ಫ್ಯಾಕ್ಟ್ ಚೆಕ್‌

519
Spread the love

ಢಾಕಾ: ಹಿಂದೂ ಧರ್ಮದ ಸಾಧುವೊಬ್ಬರು ಮುಸ್ಲಿಮರಿಗೆ ಊಟ ಬಡಿಸುತ್ತಿರುವ ಫೋಟೊವೊಂದು ಜಾಲತಾಣದಲ್ಲಿ ಹರಿದಾಡುತ್ತಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ಹಿಂಸಾಚಾರದಲ್ಲಿ ಈ ಫೋಟೊದಲ್ಲಿರುವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಇಸ್ಕಾನ್ ದೇವಾಲಯದ ಪ್ರಮುಖರಾದ ಸ್ವಾಮಿ ನಿತ್ಯ ದಾಸ್ ಪ್ರಭು ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅವರು ಕೆಲ ದಿನಗಳ ಹಿಂದಷ್ಟೇ ಇಫ್ತಾರ್ ಕೂಟ ಆಯೋಜಿಸಿ ಮುಸ್ಲಿಮರಿಗೆ ಊಟ ಬಡಿಸಿದ್ದರು ಎಂದು ಈ ಪೋಸ್ಟ್ ನಲ್ಲಿ ಹೇಳಲಾಗಿದೆ.

ಇದು ಸುಳ್ಳುಸುದ್ದಿ ಎಂದು ಲಾಜಿಕಲ್ ಇಂಡಿಯನ್ ವರದಿ ಮಾಡಿದೆ. ಬಾಂಗ್ಲಾದೇಶದ ಹಿಂಸಾಚಾರದ ವೇಳೆ ಹತ್ಯೆಗೀಡಾದ ಮತ್ತು ಹಲ್ಲೆಗೀಡಾದ ಸಾಧುಗಳ ಪಟ್ಟಿಯನ್ನು ಬಾಂಗ್ಲಾದೇಶದ ಇಸ್ಕಾನ್ ದೇವಾಲಯ ಬಹಿರಂಗಪಡಿಸಿದೆ. ಅದರಲ್ಲಿ ನಿತ್ಯ ದಾಸ್ ಅವರ ಹೆಸರಿಲ್ಲ. ನಿತ್ಯ ದಾಸ್ ಅವರ ಚಿತ್ರ ಎಂದು ಹೇಳಲಾಗಿರುವ ಚಿತ್ರವನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಪಶ್ಚಿಮ ಬಂಗಾಳದ ಮಾಯಪುರದ ಇಸ್ಕಾನ್ ದೇವಸ್ಥಾನದಲ್ಲಿ 2016ರಲ್ಲಿ ಹರೇ ಕೃಷ್ಣ ಎಂಬ ಹಿಂದೂ ಸಂಘಟನೆ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಈ ಚಿತ್ರ ತೆಗೆಯಲಾಗಿದೆ ಎಂದು ಲಾಜಿಕಲ್ ಇಂಡಿಯನ್ ಹೇಳಿದೆ.

See also  ಬೈಕ್ ಸವಾರನ ತಲೆ ಮೇಲೆ ಚಲಿಸುತ್ತಿದ್ದಾಗ ಬಿತ್ತು ತೆಂಗಿನಕಾಯಿ! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget