ಕರಾವಳಿರಾಜಕೀಯ

ಕೆಲವೇ ನಿಮಿಷಗಳಲ್ಲಿ ನಾಮಪತ್ರ ಸಲ್ಲಿಸಲಿರುವ ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್,ಅದ್ದೂರಿ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿ

325

ನ್ಯೂಸ್ ನಾಟೌಟ್ : ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ನಾಮ ಪತ್ರ ಸಲ್ಲಿಕೆಗೆ ಕ್ಷಣಗಣನೆ ಶುರುವಾಗಿದೆ.ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದು ಶಕ್ತಿ ಪ್ರದರ್ಶನದೊಂದಿಗೆ ಕೆಲವೇ ನಿಮಿಷಗಳಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ಕಾರ್ಕಳದ ಸ್ವರಾಜ್ ಮೈದಾನದಿಂದ ಆರಂಭಗೊಂಡ ಮೆರವಣಿಗೆಗೆ ಬಿಜೆಪಿ ಮುಖಂಡರು,ಅಭಿಮಾನಿಗಳು, ಕಾರ್ಯಕರ್ತರು ಸಾಕ್ಷಿಯಾಗುತ್ತಿದ್ದಾರೆ.ಇಡೀ ನಗರವೇ ಕೇಸರಿಮಯವಾಗಿ ಕಂಗೊಳಿಸುತ್ತಿದ್ದು,ಅದರೊಂದಿಗೆ ಚೆಂಡೆ ತಾಳ ಸದ್ದು,ತಾಳಕ್ಕೆ ತಕ್ಕ ಹೆಜ್ಜೆ ಇವೆಲ್ಲ ದೃಶ್ಯಗಳು ಕಂಡು ಬಂತು.

ಕಾರ್ಕಳದ ಅನಂತ ಶೈಲ ವೃತ್ತ ಮೆರವಣಿಗೆಯಲ್ಲಿ ವಿ.ಸುನೀಲ್ ಕುಮಾರ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಹಿತ ಹಲವು ಬಿಜೆಪಿ ಪ್ರಮುಖರು ಪಾಲ್ಗೊಂಡರು.ಕಾರ್ಕಳದ ಚುನಾವಣಾ ಕಣ ಈ ಸಲ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಸಲ ಹಿಂದೂ ಪರ ಸಂಘಟನೆಯ ಪ್ರಬಲ ನಾಯಕ ಪ್ರಮೋದ್ ಮುತಾಲಿಕ್ ಕಣಕ್ಕಿಳಿದಿರುವುದರಿಂದ ಸಹಜ ಕುತೂಹಲ ‌ಕೆರಳಿಸಿದೆ.

See also  ಹೇಮಾ ಕಮಿಟಿಯಂತೆ ಲೈಂಗಿಕ ದೌರ್ಜನ್ಯದ ಬಗ್ಗೆ ಸ್ಯಾಂಡಲ್‌ ವುಡ್‌ ನಲ್ಲೂ ಸಮಿತಿ ಮಾಡಲು ಸಿಎಂಗೆ ಮನವಿ..! ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು..?
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget