ಕ್ರೈಂ

ಉಪ್ಪಿನಂಗಡಿ: ಮೀನಿನ ವ್ಯಾಪಾರಿಗೆ ಹಲ್ಲೆ ಪ್ರಕರಣ: 7ಮಂದಿ ಆರೋಪಿಗಳಿಗೆ ಜಾಮೀನು

349
Spread the love

ಉಪ್ಪಿನಂಗಡಿ:    2 ತಿಂಗಳ ಹಿಂದೆ ಮೀನು ವ್ಯಾಪಾರಿಗಳಿಗೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ 13 ಮಂದಿ ಆರೋಪಿಗಳ  ಪೈಕಿ ಈಗಾಗಲೇ ಬಂಧಿತ 6 ಮಂದಿಗೆ ಜಾಮೀನು ಮಂಜೂರುಗೊಂಡಿದ್ದು, ಇದೀಗ ಉಳಿದ 7 ಮಂದಿ  ಆರೋಪಿಗಳಿಗೆ ಪುತ್ತೂರು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶರತ್ತು ಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

೨೦೨೧ನೇ ಡಿಸೆಂಬರ್ ತಿಂಗಳಲ್ಲಿ ಉಪ್ಪಿನಂಗಡಿ ಹಳೆಗೇಟ್ ನ ಸುಬ್ರಹ್ಮಣ್ಯ ಕ್ರಾಸ್‌ನಲ್ಲಿ ಮೀನು ವ್ಯಾಪಾರಿಗಳಾದ ಕಜೆಕ್ಕಾರಿನ ಮೋಹನ್‌ದಾಸ್ ಮತ್ತು ಅಶೋಕ್ ಮತ್ತು ಗ್ರಾಹಕರೊಬ್ಬರಿಗೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 13 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ೬ ಮಂದಿಯನ್ನು ಬಂಧಿಸಿದ್ದರು.  ಬಂಧಿತ ೬ ಮಂದಿಗೂ ನ್ಯಾಯಾಲಯದಲ್ಲಿ ಜಾಮೀನು ಮಂಜೂರುಗೊಂಡಿತ್ತು.

See also  ಖ್ಯಾತ ನಟ ಯೋಗಿ ಬಾಬು ಚಲಿಸುತ್ತಿದ್ದ ಕಾರು ಅಪಘಾತ..! ಇಲ್ಲಿದೆ ವಿಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget