ಕ್ರೈಂ

ಉಪ್ಪಿನಂಗಡಿ ಕೋಮುಗಲಭೆ: ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

758

ಉಪ್ಪಿನಂಗಡಿ : ಕಳೆದ ಡಿಸೆಂಬರ್ 6 ರಂದು ಉಪ್ಪಿನಂಗಡಿಯ ಮೀನು ಮಾರಾಟದ ಅಂಗಡಿಗೆ ದಾಳಿ ನಡೆಸಿ ತಲ್ವಾರಿನಿಂದ ಹಲ್ಲೆಗೈದು ಪರಾರಿಯಾಗಿದ್ದ ಆರೋಪಿಗಳ ಪೈಕಿ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತರನ್ನು ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಕುಪ್ಪೆಟ್ಟಿ ಬೈತಾರು ಮನೆ ನಿವಾಸಿ ಸರ್ಪುದ್ದೀನ್ (31) ಹಾಗೂ ಕಡಬ ತಾಲೂಕು ಕೊಣಾಲು ಗ್ರಾಮದ ಕೋಲ್ಪೆ ಕೊಳಂಬೆ ಮನೆ ನಿವಾಸಿ ಮೊಹಮ್ಮದ್ ಇರ್ಫಾನ್ (24) ಎಂದು ಗುರುತಿಸಲಾಗಿದೆ. ಡಿ 5 ರಂದು ಇಳಂತಿಲದ ಅಂಡೆತಡ್ಕ ಎಂಬಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಪ್ರತಿಯಾಗಿ ಮತೀಯ ನೆಲೆಗಟ್ಟಿನಲ್ಲಿ ಪ್ರತಿಕಾರ ಕೈಗೊಳ್ಳುವ  ಉದ್ದೇಶದಿಂದ ಇತರ ದುಷ್ಕರ್ಮಿಗಳೊಡಗೂಡಿ ಉಪ್ಪಿನಂಗಡಿಯ ಸುಬ್ರಹ್ಮಣ್ಯ ಕ್ರಾಸ್ ಬಳಿ ಇರುವ ಹಿಂದೂ ಸಮುದಾಯದ ಮೀನು ಮಾರಾಟ ಕೇಂದ್ರಕ್ಕೆ ದಾಳಿ ನಡೆಸಿ ಅಲ್ಲಿದ್ದ ಅಶೋಕ ಆಲಿಯಾಸ್ ಅನಿಲ್ ಕುಮಾರ್ , ಮತ್ತವರ ಅಣ್ಣ ಮೋಹನ್ ದಾಸ್ ಮತ್ತು ಅಂಗಡಿಗೆ ಗ್ರಾಹಕನಾಗಿ ಬಂದಿದ್ದ ಮಹೇಶ್ ರವರನ್ನು ಹತ್ಯೆಗೈಯುವ ಸಲುವಾಗಿ ತಲವಾರಿನಿಂದ ಕಡಿದು ಗಾಯಗೊಳಿಸಿದ್ದರು.

See also  ನಿನ್ನೊಂದಿಗೆ ಟೈಂಪಾಸ್ ಮಾಡಿದ್ದು ಎಂದನಂತೆ ಹುಡುಗ! ಯುವಕನ ಮನೆ ಮುಂದೆ ಧರಣಿ ಕೂತ ಯುವತಿ! ಮುಂದೇನಾಯ್ತು?
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget