ಉಜಿರೆ: ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಕಕ್ಕೆಜಾಲು ಎಂಬಲ್ಲಿ ರಾತ್ರಿ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕಳ್ಳನೊಬ್ಬ ಸುಲೈಮಾನ್ ಎಂಬುವವರ ಮನೆಯಿಂದ ಸ್ಕೂಟಿ, ಚಿನ್ನಾಭರಣ, ನಗ ನಾಣ್ಯ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಮನೆಯ ಹಂಚು ತೆಗೆದು ಒಳ ನುಗಿದ್ದ ಕಳ್ಳ ಗೋಡ್ರೇಜ್ ನಲ್ಲಿದ್ದ ನಗದು ರೂ 60,000/- 1 ಗ್ರಾಂ ತೂಕದ 1 ಜೊತೆ ಕಿವಿಯೋಲೆ, ಅಂದಾಜು ಮೌಲ್ಯ ರೂ 1500/-, 2 ಗ್ರಾಂ ತೂಕದ ಉಂಗುರಗಳು 2, ಅಂದಾಜು ಮೌಲ್ಯ 3000 ರೂ ನೋಕಿಯಾ ಕಂಪೆನಿಯ ಮೊಬೈಲ್ -1, ರೂ 600 ಹಾಗೂ ಒಳಗಿದ್ದ ಆಕ್ಟೀವಾ 6ಜಿ ದ್ವಿ ಚಕ್ರ ವಾಹನದ ಕೀಯನ್ನು ಕದ್ದುಮನೆಯ ಸಿಟೌಟ್ ನಲ್ಲಿದ್ದ ಆಕ್ಟೀವಾ 6ಜಿ ಸಮೇತ ಕಳವು ಮಾಡಿಕೊಂಡು ಹೋಗಿದ್ದ. ಒಟ್ಟು ರೂ 1,35,100 ಮೌಲ್ಯದ ಸ್ವತ್ತು ಕಾಣೆಯಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು 37 ವರ್ಷದ ಮುಂಡಾಜೆ ಗ್ರಾಮದ ಇಂತಿಯಾಜ್ ಅನ್ನುವವನನ್ನು ಬಂಧಿಸಿದ್ದಾರೆ.