ಸುಳ್ಯ: ಉಬರಡ್ಕ ಮಿತ್ತೂರು ಗ್ರಾಮದ ನರಸಿಂಹ ಶಾಸ್ತ್ರವು ರಸ್ತೆಯ ಕಾಂಕ್ರೀಟಿಕರಣಕ್ಕೆ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಉಸ್ತುವಾರಿ ಸಚಿವ ಹಾಗೂ ಸುಳ್ಯದ ಶಾಸಕ ಎಸ್. ಅಂಗಾರ ಚಾಲನೆ ನೀಡಿದರು. ಮಳೆಹಾನಿ ಯೋಜನೆಯಲ್ಲಿ 15 ಲಕ್ಷ ಕಾಮಗಾರಿ ಪೂರ್ಣಗೊಂಡಿದ್ದು ಮತ್ತು ಮುಂದಿನ ಹಂತದಲ್ಲಿ 20 ಲಕ್ಷ ಅನುದಾನ ಒದಗಿಸುವ ಭರವಸೆಯನ್ನು ಸಚಿವರು ನೀಡಿದ್ದರು. ಈ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮತ್ತು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ದಾಮೋದರ ಗೌಡ ಮದುವೆಗದ್ದೆ, ಶಶಿಧರ್, ಪ್ರಶಾಂತ್ ಪಾನತ್ತಿಲ, ಶಾರದಾ ಶೆಟ್ಟಿ, ಯುಬಿ ಭಾಸ್ಕರ್ ರಾವ್, ಹರೀಶ್ ಉಬರಡ್ಕ, ಹರಿಪ್ರಸಾದ್ ಪಾನತ್ತಿಲ, ರಾಮಕೃಷ್ಣ ನಾಯ್ಕ್ ಕಕ್ಕೆಬೆಟ್ಟು, ಜಗದೀಶ್ ಕಕ್ಕೆಬೆಟ್ಟು, ಯು ಆರ್ ಮೋಹನ್ ಭಟ್, ಚಂದ್ರಶೇಖರ್ ಅನುಗ್ರಹ, ಶಶಿಧರ್, ಚೇತನ್ ಪಾನತ್ತಿಲ, ಜಯರಾಮ ಪ್ರಭು, ಜನಾರ್ಧನ ಪಟ್ರುಕೋಡಿ, ವಿಜಯ ಕುಮಾರ್ ಉಬರಡ್ಕ, ನಾರಾಯಣ ಬಡ್ಡಡ್ಕ, ಶೇಖರ ಗೌಡ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.