ಸುಳ್ಯ: ಉಬರಡ್ಕ-ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು ಇತ್ತೀಚೆಗೆ ನಿಧನರಾದ ಚೋಮಕ್ಕ ಪಟ್ರಕೊಡಿ ಅವರ ಕುಟುಂಬಕ್ಕೆ ಮರಣ ಸಾಂತ್ವನ ಧನಸಹಾಯ ರೂ.7,000 ಅನ್ನು ಹಸ್ತಾಂತರಿಸಲಾಯಿತು. ಮೃತರ ಪುತ್ರ ಚಂದ್ರಶೇಖರ ರವರಿಗೆ ಸಂಘದ ಅಧ್ಯಕ್ಷರಾದ ದಾಮೋದರ ಗೌಡ ಮದುವೆಗದ್ದೆ ಧನ ಸಹಾಯದ ಚೆಕ್ ವಿತರಿಸಿದರು. ಸಂಘದ ನಿರ್ದೇಶಕ ಸುರೇಶ ಎಂ ಎಚ್ , ವಿಜಯ ಕುಮಾರ್ ಉಬರಡ್ಕ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್ ಪಡ್ಪು. ನಿವೃತ್ತ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ನಿತ್ಯಾನಂದ ಎನ್ ಹಾಗೂ ಭರತ್ ಮಾಣಿಬೆಟ್ಟು, ಶ್ರೀಧರ ಅಡಿಗೈ. ಗೋಪಾಲ ಪಟ್ರಕೊಡಿ ಉಪಸ್ಥಿತರಿದ್ದರು.