ಕ್ರೈಂ

ಬುದ್ಧಿಮಾಂದ್ಯ ಯುವತಿ ಮೇಲೆ ಎಎಸ್ಐ ಅತ್ಯಾಚಾರ, ಹೇಯ ಕೃತ್ಯ ಸಾಬೀತು

480

ತುಮಕೂರು: ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಎಸ್​ಐ ಉಮೇಶಯ್ಯ ಅಪರಾಧಿ ಎಂದು ತುಮಕೂರು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಜನವರಿ 31 ರಂದು ಶಿಕ್ಷೆ ಪ್ರಮಾಣವನ್ನು ನ್ಯಾಯಾಲಯ ಪ್ರಕಟಿಸಲಿದೆ. 2017ರ ಜ.15ರಂದು ತುಮಕೂರಿನ ಅಂತರಸನಹಳ್ಳಿ ಸೇತುವೆ ಬಳಿ ಅತ್ಯಾಚಾರವೆಸಗಿದ್ದ ಎಎಸ್​ಐ ಉಮೇಶಯ್ಯ ಸದ್ಯ ಜೈಲು ಸೇರುವಂತಾಗಿದೆ. ತುಮಕೂರು ಗ್ರಾಮಾಂತರ ಠಾಣೆ ಎಎಸ್​ಐ ಆಗಿದ್ದ ಉಮೇಶಯ್ಯ, ಡ್ರಾಪ್​ ಕೊಡುವ ನೆಪದಲ್ಲಿ ಬೊಲೆರೊ ವಾಹನದಲ್ಲಿ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.

See also  ಸುಳ್ಯದಿಂದ ಸಂಪಾಜೆವರೆಗೆ 750 ಸಂಚಾರಿ ನಿಯಮ ಉಲ್ಲಂಘನೆ ಕೇಸ್ ದಾಖಲು, ನೋ ಪಾರ್ಕಿಂಗ್ , ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮಾಡಿದವರ ಕಿಸೆಗೆ ಕತ್ತರಿ..!, ಸಂಗ್ರಹಗೊಂಡ ಹಣವೆಷ್ಟು ಗೊತ್ತಾ..?
  Ad Widget   Ad Widget   Ad Widget   Ad Widget