ನಮ್ಮ ತುಳುವೇರ್ವೈರಲ್ ನ್ಯೂಸ್ಸಿನಿಮಾ

ತುಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಖ್ಯಾತ ಬಾಲಿವುಡ್ ನಟ, ರೂಪೇಶ್ ಶೆಟ್ಟಿ ಬಂದು ಕಥೆ ಹೇಳಿದಾಗ ಇಷ್ಟ ಆಯ್ತು ಎಂದ ನಟ

538

ನ್ಯೂಸ್ ನಾಟೌಟ್: ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಂಗಳೂರು ಮೂಲದವರು. ಅವರಿಗೆ ತುಳು ಭಾಷೆ ಸ್ಪಷ್ಟವಾಗಿ ಮಾತನಾಡಲು ಬರುತ್ತದೆ. ಅವರು ಬಾಲಿವುಡ್ ​ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ತುಳು ಸಿನಿಮಾ ಮಾಡುತ್ತಿದ್ದಾರೆ. ರೂಪೇಶ್ ಶೆಟ್ಟಿ ಜೊತೆ ನಟಿಸಲು ಮುಂದಾಗಿದ್ದಾರೆ. ಅವರಿಗೆ ತುಳು ಸಿನಿಮಾ ಮಾಡಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತು ಎಂದು ಅವರೇ ಹೇಳಿಕೊಂಡಿದ್ದಾರೆ. ಈಗ ಅವರು ತಮ್ಮ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.

ರೂಪೇಶ್ ಶೆಟ್ಟಿ ಇತ್ತೀಚೆಗೆ ‘ಜೈ’ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದಾರೆ. ಇದನ್ನು ರೂಪೇಶ್ ಶೆಟ್ಟಿ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿ ಅವರೇ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇದಕ್ಕೆ ಬಾಲಿವುಡ್ ಹೀರೋನ ಆಗಮನ ಆಗಿದೆ ಎಂಬುದು ವಿಶೇಷ. ರೂಪೇಶ್ ಶೆಟ್ಟಿ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದಾರೆ.

ಸಿನಿಮಾ ಬಗ್ಗೆ ಮಾತನಾಡಿರುವ ನಟ ಸುನೀಲ್ ಶೆಟ್ಟಿ, “ಮೊದಲಿನಿಂದಲೂ ತುಳು ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ತುಳು ಚಿತ್ರರಂಗ ತುಂಬಾನೇ ಅಭಿವೃದ್ಧಿ ಕಂಡಿದೆ. ರೂಪೇಶ್ ಶೆಟ್ಟಿ ಬಂದು ಕಥೆ ಹೇಳಿದಾಗ ಇದನ್ನು ಮಾಡಬೇಕು ಎಂದು ಅನಿಸಿತು. ಸಬ್ಜೆಕ್ಟ್ ನನಗೆ ಇಷ್ಟ ಆಯಿತು. ಇಲ್ಲಿನ ಜನರು ನನಗೆ ಯಾವಾಗಲೂ ಬೆಂಬಲ ನೀಡುತ್ತಾರೆ. ಸುಬ್ರಮಣ್ಯ, ಧರ್ಮಸ್ಥಳ ಮೊದಲಾದ ಪುಣ್ಯಸ್ಥಳಗಳಿಗೆ ಬರುತ್ತಾ ಇರುತ್ತೇನೆ’ ಎಂದಿದ್ದಾರೆ.

Click

https://newsnotout.com/2025/01/kumbha-mela-nagasadhu-kannada-news-3-5-crore-people/
See also  ಹೆಲ್ಮೆಟ್ ಹಾಕದ ಪೊಲೀಸರಿಗೂ ದಂಡ ವಿಧಿಸಿದ ಎಸ್.ಪಿ..! ಕರ್ಕಶ ಸೈಲೆನ್ಸರ್ ಗಳನ್ನು ರೋಡ್ ರೋಲರ್ ನಿಂದ ಪುಡಿ ಮಾಡಿಸಿದ ಪೊಲೀಸರು..!
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget