ಕರಾವಳಿ

ಮಂಗಳೂರಿನಲ್ಲಿ ತೃತೀಯ ಲಿಂಗಿಗಳಿಂದ ಯಕ್ಷಗಾನಕ್ಕೆ ಸಿದ್ಧತೆ, ಇತಿಹಾಸದಲ್ಲೇ ಮೊದಲು

322
Spread the love

ಮಂಗಳೂರು: ಯಕ್ಷಗಾನದ ಇತಿಹಾಸದಲ್ಲೇ ಮೊದಲು ಎನ್ನುವ ಪ್ರಯತ್ನವೊಂದು ನಡೆದಿದೆ. ಇದೇ ಮೊದಲ ಬಾರಿಗೆ ತೃತೀಯ ಲಿಂಗಿಗಳಿಂದ ಫೆ.25 ರಂದು ಯಕ್ಷಗಾನ ಸೇವೆ ಮಂಗಳೂರಿನ ಕೋಡಿಕಲ್ ಕಟ್ಟೆ ಮೈದಾನದಲ್ಲಿ ನಡೆಯಲಿದೆ.

ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಾವಂಜೆ ಜ್ಷಾನ ಕೃಪಾ ಪೋಷಿತ ಯಕ್ಷಗಾನ ಮೇಳದವರಿಂದ ಈ ಯಕ್ಷಗಾನ ಸೇವೆ ನಡೆಯಲಿದೆ. ಸುಮಾರು 1500 ಕ್ಕೂ ಹೆಚ್ಚು ಮಂದಿ ಆಗಮಿಸಿ ಯಕ್ಷಗಾನ ವೀಕ್ಷಿಸುವ ನಿರೀಕ್ಷೆ ಇದೆ. ಯಾರಿಂದಲೂ ದೇಣಿಗೆ ಪಡೆಯದ ತೃತೀಯ ಲಿಂಗಿಗಳು ತಾವು ದುಡಿದ ಹಣದಲ್ಲಿ ಯಕ್ಷಗಾನ ಆಯೋಜಿಸಿ ದೇವಿಯ ಸೇವೆಯನ್ನು ಮಾಡುತ್ತಿರುವುದು ವಿಶೇಷವಾಗಿದೆ.

See also  ಅಡ್ಕಾರು: ಕಾಂಗ್ರೆಸ್ ಹಿರಿಯ ನಾಯಕನ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು
  Ad Widget   Ad Widget   Ad Widget   Ad Widget   Ad Widget   Ad Widget