Latestಅಟೋಮೊಬೈಲ್ರಾಜ್ಯವೈರಲ್ ನ್ಯೂಸ್

ಕರ್ನಾಟಕದಲ್ಲೇ ತಯಾರಾಗುವ ಟೊಯೊಟಾ ಕಾರುಗಳಿಗೆ ಭಾರೀ ಡಿಮ್ಯಾಂಡ್..! ಫೆಬ್ರವರಿ ಒಂದೇ ತಿಂಗಳಲ್ಲಿ 28,414 ಯುನಿಟ್ ಕಾರುಗಳ ಮಾರಾಟ..!

447
Spread the love

ನ್ಯೂಸ್‌ ನಾಟೌಟ್ : ಭಾರತದಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್, ಪ್ರಖ್ಯಾತ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಕರ್ನಾಟಕದ ಬಿಡದಿಯಲ್ಲಿ ಬೃಹತ್ ತಯಾರಕ ಘಟಕವನ್ನು ಹೊಂದಿದ್ದು, ಹಲವು ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಸದ್ಯ ಕಂಪನಿಯು ಈ ಫೆಬ್ರವರಿ ತಿಂಗಳ ಒಟ್ಟಾರೆ ಕಾರು ಮಾರಾಟದ ಅಂಕಿಅಂಶಗಳ ವರದಿಯನ್ನು ಪ್ರಕಟಿಸಿದ್ದು, ನಿರೀಕ್ಷೆಗೂ ಮೀರಿದ ಪ್ರಗತಿ ಸಾಧಿಸಿದೆ.

ಕಳೆದ ತಿಂಗಳು (ಫೆಬ್ರವರಿ – 2025) ಟೊಯೊಟಾ ಕಿರ್ಲೋಸ್ಕರ್ ಮೋಟಾರ್, ಬರೋಬ್ಬರಿ 28,414 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. 2024ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 25,220 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ (YoY) ಶೇಕಡ 13% ಬೆಳವಣಿಗೆಯಾಗಿದೆ.

ಅದರಲ್ಲೂ ಟೊಯೊಟಾ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 26,414 ಯುನಿಟ್ ಕಾರುಗಳನ್ನು ಮಾರಾಟಗೊಳಿಸಿದ್ದರೆ, ವಿದೇಶಕ್ಕೆ 2,000 ಯುನಿಟ್‌ಗಳನ್ನು ರಫ್ತು ಮಾಡಿದೆ. ಟೊಯೊಟಾ ಈ ಪರಿಪ್ರಮಾಣದಲ್ಲಿ ಅಧಿವೃದ್ದಿ ಕಾಣಲು ಇನ್ನೋವಾ ಕ್ರಿಸ್ಟಾ, ಇನ್ನೋವಾ ಹೈಕ್ರಾಸ್, ಅರ್ಬನ್ ಕ್ರೂಸರ್ ಹೈರೈಡರ್, ಟೈಸರ್, ಗ್ಲಾನ್ಜಾ, ಹಿಲಕ್ಸ್, ಫಾರ್ಚೂನರ್ ಹಾಗೂ ರೂಮಿಯನ್‌ ಕಾರುಗಳು ಪ್ರಮಖವಾದ ಕಾರಣವಾಗಿವೆ.

See also  ನಾಪತ್ತೆಯಾದ 11 ಬಾಲಕಿಯರ ಜಾಡು ಹಿಡಿದ ಪೊಲೀಸರಿಗೆ ಕಾದಿತ್ತು ಶಾಕ್..! ಅಂಕಿತ್ ಎಂದು ಹೆಸರು ಬದಲಿಸಿಕೊಂಡಿದ್ದ ಅಫ್ತಾಬ್ ಖಾನ್ ನ ರಹಸ್ಯ ಬಯಲು..!
  Ad Widget   Ad Widget   Ad Widget   Ad Widget