ಸುಳ್ಯ

ಈಶ್ವರಪ್ಪ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಟಿ ಎಂ ಶಹೀದ್ ತೆಕ್ಕಿಲ್ ಟೀಕೆ

592
Spread the love

ಸುಳ್ಯ: ಕಾಂಗ್ರೆಸ್ ನಾಯಕರ ಕುರಿತು ಅವಾಚ್ಯ ಶಬ್ದ ಪ್ರಯೋಗ ಮಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ ಎಸ್ ಈಶ್ವರಪ್ಪನವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಇದು ಅವರ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕೆ ಪಿ ಸಿ ಸಿ ಮಾಜಿ ಕಾರ್ಯದರ್ಶಿ ಟಿ ಎಂ ಶಹೀದ್ ತೆಕ್ಕಿಲ್ ಟೀಕಿಸಿದ್ದಾರೆ. ಪದೇ ಪದೇ ಮುಸ್ಲಿಮರನ್ನು ಟೀಕಿಸುವ ಈಶ್ವರಪ್ಪನವರಿಗೆ ಸಂಸ್ಕಾರ, ಸಂಸ್ಕೃತಿಯೇ ಗೊತಿಲ್ಲ, ಅವರು ಕೂಡಲೆ ತಮ್ಮ ಮಾತನ್ನು ವಾಪಸ್ ಪಡೆದುಕೊಳ್ಳ ಬೇಕೆಂದು ಟಿ ಎಂ ಶಹೀದ್ ಆಗ್ರಹಿಸಿದ್ದಾರೆ. ಸರಕಾರದಲ್ಲಿ ಕೋಳಿ ಮೊಟ್ಟೆ ಹೆಸರಿನಲ್ಲಿ 25 ಲಕ್ಷ ರೂಪಾಯಿ ಭ್ರಷ್ಟಾಚಾರವನ್ನು ಮಾಡಿದ ಜೊಲ್ಲೆ ಯಂತವರನ್ನು ಮಂತ್ರಿ ಮಾಡಿದ ಇವರಿಂದ ಯಾವ ತರಹದ ಆಡಳಿತವನ್ನು ನಿರೀಕ್ಷಿಸಲು ಸಾಧ್ಯ ಎಂದು ಟಿ ಎಂ ಶಹೀದ್ ಹರಿಹಾಯ್ದರು.

See also  ಸುಳ್ಯ: ಹಿಂದಿನ ಬಾಗಿಲಿನಿಂದ ನುಗ್ಗಿ ಕಳ್ಳರ ಕೈಚಳಕ, ಓಡಿ ಬಂದ ಮನೆಯೊಡತಿಯ ಕತ್ತಿನಿಂದ ಚಿನ್ನದ ಸರ ಕದ್ದು ಎಸ್ಕೇಪ್..!
  Ad Widget   Ad Widget   Ad Widget   Ad Widget   Ad Widget   Ad Widget